ಕರ್ನಾಟಕ

karnataka

ETV Bharat / sitara

ಬಾಹುಬಲಿಗೆ ರಾಕಿ ಸಾಥ್​​; 'ಸಲಾರ್'​​​ ಮುಹೂರ್ತದಲ್ಲಿ ಯಶ್​​ - ಯಶ್​ ಸುದ್ದಿ

ಸಲಾರ್ ಸಿನಿಮಾ ಹೈದರಾಬಾದ್​​ನಲ್ಲಿ 11 ಗಂಟೆಗೆ ಸೆಟ್ಟೇರಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ಯಶ್​​ ಕೂಡ ಭಾಗಿಯಾಗಿದ್ದಾರೆ.

ಬಾಹುಬಾಲಿಗೆ ರಾಕಿ ಸಾಥ್​​ :ಸಲಾರ್​​​ ಮುಹೂರ್ತದಲ್ಲಿ ಯಶ್​​
ಬಾಹುಬಾಲಿಗೆ ರಾಕಿ ಸಾಥ್​​ :ಸಲಾರ್​​​ ಮುಹೂರ್ತದಲ್ಲಿ ಯಶ್​​

By

Published : Jan 15, 2021, 1:50 PM IST

Updated : Jan 15, 2021, 3:01 PM IST

ಹೊಂಬಾಳೆ ಫಿಲಂಸ್ ಬ್ಯಾನರ್​​​ನಲ್ಲಿ ಸಿದ್ಧವಾಗಲಿರುವ ಸಲಾರ್ ಸಿನಿಮಾ ಹೈದರಾಬಾದ್​​ನಲ್ಲಿ 11 ಗಂಟೆಗೆ ಸೆಟ್ಟೇರಿದೆ. ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ಯಶ್​​ ಕೂಡ ಭಾಗಿಯಾಗಿದ್ದಾರೆ.

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸಲಾರ್ ದೇಶವ್ಯಾಪಿ​ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿತ್ತು.

ಮುಹೂರ್ತ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರ್ ಹಾಗೂ ಪ್ರಭಾಸ್ ಸೇರಿದಂತೆ ಸಾಕಷ್ಟು ಗಣ್ಯರು ಸಾಕ್ಷಿಯಾಗಿದ್ದಾರೆ‌.

ಇದೇ ತಿಂಗಳ ಅಂತ್ಯಕ್ಕೆ ಸಲಾರ್ ಚಿತ್ರೀಕರಣ ಆರಂಭ ಆಗಲಿದ್ದು ಈಗಾಗಲೇ ಅದಕ್ಕಾಗಿ ಭರ್ಜರಿ ತಯಾರಿ ಸಹ ಶುರುವಾಗಿದೆ. ಇನ್ನುಳಿದ ಪಾತ್ರವರ್ಗದ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ.

Last Updated : Jan 15, 2021, 3:01 PM IST

ABOUT THE AUTHOR

...view details