‘ಕೆಜಿಎಫ್ ಚಾಪ್ಟರ್ 2’ ಶೂಟಿಂಗ್ ಮುಗಿಸಿರುವ ನಟ ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಭೀತಿಯಿಂದ ‘ರಾಖಿ ಭಾಯ್’ ಕ್ವಾರಂಟೈನ್ ಆಗಿದ್ದಾರೆ.
ಕೆಜಿಎಫ್-2 ಶೂಟಿಂಗ್ ಮುಗಿಸಿ ಕ್ವಾರಂಟೈನ್ ಆದ್ರು 'ರಾಕಿ ಭಾಯ್' - ಯಶ್ ಕ್ವಾರಂಟೈನ್
ಶೂಟಿಂಗ್ ಮುಗಿಸಿರುವ ನಟ ರಾಕಿಂಗ್ ಸ್ಟಾರ್ ಯಶ್ ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸಾಗಿದ್ದು, ಹೋಟೆಲ್ವೊಂದರಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಕ್ವಾರಂಟೈನ್ ಆದ್ರು 'ರಾಕಿಭಾಯ್'
ಇತ್ತೀಚೆಗೆ ಮಂಗಳೂರಿನಲ್ಲಿ ಶೂಟಿಂಗ್ ಮಾಡಿದ್ದ ಕೆಜಿಎಫ್ ಚಿತ್ರತಂಡ ಕೊನೆಯ ಹಂತದ ಶೂಟಿಂಗ್ಗೆ ಹೈದರಾಬಾದ್ಗೆ ತೆರಳಿತ್ತು. ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿದ ಯಶ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಮನೆಯಲ್ಲಿ ಯಶ್ ಪತ್ನಿ ರಾಧಿಕಾ, ಪುತ್ರಿ ಐರಾ ಹಾಗೂ ಮುದ್ದಿನ ಮಗ ಯಥರ್ವ್ ಇದ್ದು, ಕುಟುಂಬದ ಮಂದಿ ಹಾಗೂ ಯಾರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಿಂದ ಹೋಟೆಲ್ನಲ್ಲಿ ಯಶ್ ಕ್ವಾರಂಟೈನ್ ಆಗಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮನೆಗೆ ತೆರಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.