ಕೆಜಿಎಫ್ ಕನ್ನಡ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ. ಸದ್ಯ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಗೆ ಮೂರು ದಿನ ಬಾಕಿ ಇರುವಾಗಲೇ, ಕೆಜಿಎಫ್ನಲ್ಲಿ ನಟಿಸಿರುವ ಬಾಲಿವುಡ್ ನಟಿ ರವೀನಾ ಟಂಡನ್ ಮೊದಲ ಬಾರಿಗೆ ಸಿನಿಮಾದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಶೂಟಿಂಗ್ ಅನುಭವ ನಿಜಕ್ಕೂ ಅದ್ಭುತವಾಗಿತ್ತು. ಇನ್ನು ಯಶ್ ನಿಜಕ್ಕೂ ಅಪರೂಪದ ವ್ಯಕ್ತಿ. ಸಖತ್ ಟ್ಯಾಲೆಂಟ್ ಜೊತೆ ಹಾರ್ಡ್ ವರ್ಕರ್ ಎಂದು ರವೀನಾ ಟಂಡನ್ ಹೇಳಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲಿ ನನ್ನದು ಆಕರ್ಷಕ ಮತ್ತು ವಿಭಿನ್ನ ಪಾತ್ರ. ಈ ಚಿತ್ರದಲ್ಲಿ ರಮಿಕಾ ಸೇನ್ ಎಂಬ ಪಾತ್ರ ತುಂಬಾ ಶಕ್ತಿಶಾಲಿ ಪಾತ್ರ ಎಂದಿದ್ದಾರೆ.
ಅಭಿಮಾನಿಗಳು ಕೆಜಿಎಫ್ ನೋಡಲು ಕಾತುರರಾಗಿದ್ದಾರೆ. ಇನ್ನು ಕೆಜಿಎಫ್ ಚಾಪ್ಟರ್ 1 ಬಹಳ ದೊಡ್ಡ ಪ್ರಮಾಣದಲ್ಲಿ ಮೆಚ್ಚುಗೆ ಗಳಿಸಿತ್ತು. ಅದಕ್ಕಿಂತ ದುಪ್ಪಟ್ಟು ಕೆಜಿಎಫ್ ಚಾಪ್ಟರ್ 2 ಸಿನಿಮಾ ಗಳಿಸುತ್ತದೆ ಎಂದರು. ನನ್ನ ಫಸ್ಟ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಹಾಗೆಯೇ ನಾನೂ ಕೂಡ ಬಿಗ್ ಸ್ಕ್ರೀನ್ನಲ್ಲಿ ರಮೀಕಾ ಸೇನ್ ಪಾತ್ರವನ್ನು ನೋಡಲು ಇಷ್ಟ ಪಡ್ತೀನಿ. ನನಗೆ ಸಿನಿಮಾ ಸ್ಟೋರಿ ಲೈನ್ ಬಹಳ ಹಿಡಿಸಿತ್ತು ಮತ್ತು ಟೀಮ್ ಜೊತೆಗೆ ಸಂಪರ್ಕದಲ್ಲಿದ್ದೇನೆ ಎಂದರು.
ನಾನು ಕೆಜಿಎಫ್-1 ನೋಡುವ ಮೊದಲೇ ನನಗೆ ಸ್ಕ್ರಿಪ್ಟ್ ನರೇಟ್ ಮಾಡಿದ್ರು. ನಾನು ಸಿನಿಮಾ ನೋಡಿದಾಗ ಅದ್ಭುತ ಎನಿಸಿತ್ತು. ಹಾಗೇ ಮೊದಲ ಪಾರ್ಟ್ ಹಾಗೂ ಎರಡನೇ ಪಾರ್ಟ್ಗೆ ಬೆಸೆದಿರುವ ಸಂಬಂಧ ಪವರ್ ಫುಲ್ ಆಗಿದೆ. ಹೀಗಾಗಿ ನಾನು ಈ ಸಿನಿಮಾದಲ್ಲಿ ನಟಿಸೋದಿಕ್ಕೆ ಒಪ್ಪಿಕೊಂಡೆ ಎಂದು ರವೀನಾ ಟಂಡನ್ ಹೇಳಿದ್ದಾರೆ.
ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೆಲಸ ಪವರ್ ಫುಲ್ ಆಗಿದೆ. ಸಿಂಪಲ್ ಆಗಿ ಕಾಣುವ ಅವರ ತಲೆಯಲ್ಲಿ ಓಡುವ ಐಡಿಯಾಗಳನ್ನ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಶಾಂತ್ ನೀಲ್ ತುಂಬಾ ಕ್ರಿಯೇಟಿವ್ ಡೈರೆಕ್ಟರ್ ಟಂಡನ್ ಬಣ್ಣಿಸಿದ್ದಾರೆ.