ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಅಂತಾ ಕರೆಯಿಸಿಕೊಂಡಿರುವ ಸ್ಟಾರ್ ಜೋಡಿ ಅಂದರೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್. ನಿನ್ನೆಯಷ್ಟೇ ಈ ತಾರಾ ಜೋಡಿ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು.
2016ರ ಡಿಸೆಂಬರ್ 9ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಾಕಿಂಗ್ ಜೋಡಿಯ ಸುಂದರ ದಾಂಪತ್ಯಕ್ಕೆ ಈಗ 5ನೇ ವರ್ಷದ ಸಂಭ್ರಮ. ನಿನ್ನೆಯಷ್ಟೆ ರಾಕಿಂಗ್ ದಂಪತಿ ಮನೆಯಲ್ಲೇ ಕೇಕ್ ಕತ್ತರಿಸುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ರು. ಈ ಸಮಯದಲ್ಲಿ ಯಶ್ ಮುದ್ದಿನ ಮಡದಿಗೆ ಗುಲಾಬಿ ಹೂಗಳನ್ನು ಕೊಟ್ಟು ವಿಶ್ ಮಾಡಿದ್ದಾರೆ.