ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ಬಿಡುಗಡೆಯಾಗಿದ್ದೇ ತಡ, ರಾತ್ರೋ ರಾತ್ರಿ ನ್ಯಾಷನಲ್ ಸ್ಟಾರ್ ಆಗಿ ಹೋದ್ರು. ಇನ್ನು ಯಶ್ ತಮ್ಮ ಪುತ್ರಿ ಐರಾ ಪೋಟೋ ರಿವೀಲ್ ಮಾಡುತ್ತಿದ್ದಂತೆ ಐರಾಗೆ ಕೂಡಾ ಸಾಕಷ್ಟು ಫ್ಯಾನ್ಗಳು ಹುಟ್ಟಿಕೊಂಡ್ರು. ಕಳೆದ ಡಿಸೆಂಬರ್ನಲ್ಲಿ ಐರಾಗೆ ಒಂದು ವರ್ಷ ತುಂಬಿದ್ದು ಇಷ್ಟು ಚಿಕ್ಕ ವಯಸ್ಸಿಗೆ ಐರಾ ಕೂಡಾ ಸೆಲಬ್ರಿಟಿ ಆಗಿಹೋಗಿದ್ದಾಳೆ.
ಅಮ್ಮ ತನ್ನ ಉಗುರು ಕತ್ತರಿಸುವಾಗ ಕಿಲ ಕಿಲ ನಕ್ಕ ಐರಾ...ವಿಡಿಯೋ ವೈರಲ್ - ಯಶ್ ಪುತ್ರಿ ಐರಾ ವಿಡಿಯೋ ವೈರಲ್
ಯಶ್ ದಂಪತಿ ಆಗ್ಗಾಗ್ಗೆ ತಮ್ಮ ಮುದ್ದು ಮಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಐರಾಳ ಮತ್ತೊಂದು ವಿಡಿಯೋ ವೈರಲ್ ಆಗಿದೆ. ರಾಧಿಕಾ ಪಂಡಿತ್ ಮಗಳೊಂದಿಗೆ ಆಟವಾಡುತ್ತಾ ಆಕೆಯ ಉಗುರನ್ನು ಕತ್ತರಿಸುತ್ತಿರುವಾಗ ಐರಾ ಕೂಡಾ ಅಮ್ಮನ ತಮಾಷೆಗೆ ಪ್ರತಿಯಾಗಿ ಕಿಲ ಕಿಲ ನಕ್ಕಿದ್ದಾಳೆ.
ಯಶ್ ದಂಪತಿ ಆಗ್ಗಾಗ್ಗೆ ತಮ್ಮ ಮುದ್ದು ಮಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಐರಾಳ ಮತ್ತೊಂದು ವಿಡಿಯೋ ವೈರಲ್ ಆಗಿದೆ. ರಾಧಿಕಾ ಪಂಡಿತ್ ಮಗಳೊಂದಿಗೆ ಆಟವಾಡುತ್ತಾ ಆಕೆಯ ಉಗುರನ್ನು ಕತ್ತರಿಸುತ್ತಿರುವಾಗ ಐರಾ ಕೂಡಾ ಅಮ್ಮನ ತಮಾಷೆಗೆ ಪ್ರತಿಯಾಗಿ ಕಿಲ ಕಿಲ ನಕ್ಕಿದ್ದಾಳೆ. ಬಹಳಷ್ಟು ಮಕ್ಕಳು ಉಗುರು ಕತ್ತರಿಸುವುದಾಗ ಅಳುವುದೋ ಅಥವಾ ಕೈ ನೀಡದೆ ಹಠ ಮಾಡುವುದು ಸಾಮಾನ್ಯ. ಆದರೆ ಐರಾ ನಗುತ್ತಾ, ಅಮ್ಮನೊಂದಿಗೆ ಎಂಜಾಯ್ ಮಾಡುತ್ತಾ ಖುಷಿಯಾಗಿ ಉಗುರು ಕತ್ತರಿಸಿಕೊಳ್ಳುತ್ತಿದ್ದಾಳೆ. 'ನಾನು ಬಹಳ ದಿನಗಳಿಂದ ಐರಾಳ ಯಾವುದೇ ವಿಡಿಯೋ ಅಪ್ಲೋಡ್ ಮಾಡಿರಲಿಲ್ಲ. ಆದರೆ ನಿಮ್ಮೆಲ್ಲರ ಒತ್ತಾಯದ ಮೇರೆಗೆ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದೇನೆ' ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
TAGGED:
ಯಶ್ ಪುತ್ರಿ ಐರಾ ವಿಡಿಯೋ ವೈರಲ್