'ಕೆಜಿಎಫ್' ಚಿತ್ರ ಬಿಡುಗಡೆಯಾದಾಗಿನಿಂದ ಯಶ್ ಭಾರೀ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಯಶ್ ಮಗ ಯಥರ್ವನ ನಾಮಕರಣವನ್ನು ಹಾಸನದ ತಮ್ಮ ಹೊಸ ಫಾರ್ಮ್ಹೌಸ್ನಲ್ಲಿ ಸರಳವಾಗಿ ಮಾಡಿದ್ದರು. ಇದೀಗ ಯಶ್ ಹಾಗೂ ಪುತ್ರ ಯಥರ್ವ್ ಮತ್ತೆ ಸುದ್ದಿಯಲ್ಲಿದ್ದಾರೆ.
ವಸುದೇವ, ಬಾಲಕೃಷ್ಣನ ಅವತಾರದಲ್ಲಿ ಯಶ್ ಮತ್ತು ಯಥರ್ವ್...! - ಕೃಷ್ಣನಾಗಿ ಯಥರ್ವ್
ಅಭಿಮಾನಿಯೊಬ್ಬರು ಯಶ್ ಹಾಗೂ ಯಥರ್ವನ ಫೋಟೋವನನ್ನು ವಸುದೇವ ಹಾಗೂ ಕೃಷ್ಣನಾಗಿ ಡಿಜಿಟಲ್ ಪೇಯ್ಟಿಂಗ್ ಮಾಡಿದ್ದುಈ ಫೋಟೋ ಈಗ ವೈರಲ್ ಆಗಿದೆ.
![ವಸುದೇವ, ಬಾಲಕೃಷ್ಣನ ಅವತಾರದಲ್ಲಿ ಯಶ್ ಮತ್ತು ಯಥರ್ವ್...! Yash with son](https://etvbharatimages.akamaized.net/etvbharat/prod-images/768-512-8878718-509-8878718-1600673750875.jpg)
ಪುತ್ರನೊಂದಿಗೆ ಯಶ್
ಯಶ್ ತಮ್ಮ ಪುತ್ರನನ್ನು ಎತ್ತಿಕೊಂಡಿರುವ ಫೋಟೋವೊಂದನ್ನು ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಫೋಟೋವನ್ನು ಮಂಗಳೂರಿನ ಅಭಿಮಾನಿಯೊಬ್ಬರು ಎಡಿಟ್ ಮಾಡಿ ಯಥರ್ವನಿಗೆ ಬಾಲಕೃಷ್ಣನ ರೂಪ ಹಾಗೂ ಯಶ್ ಅವರಿಗೆ ವಸುವೇವನ ರೂಪ ನೀಡಿದ್ದಾರೆ. ಗಡ್ಡಧಾರಿ ಯಶ್ ಹಾಗೂ ಪುಟ್ಟ ಯಥರ್ವನ ಈ ಫೋಟೋ ನೋಡಿ ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.