ಕರ್ನಾಟಕ

karnataka

ETV Bharat / sitara

ಸಿನಿಮಾದಲ್ಲೂ ಯಕ್ಷಗಾನ ಕಲೆ ಅನಾವರಣಕ್ಕೆ ಬನ್ನಂಜೆ ಸಿದ್ಧ - ಸುಗಂಧಿ ಸಿನಿಮಾ

ಚಿತ್ರರಂಗಕ್ಕೂ ಯಕ್ಷಗಾನಕ್ಕೂ ಅಷ್ಟೊಂದು ನಂಟು ಇರದಿದ್ದರೂ ಅನೇಕ ಖ್ಯಾತ ಯಕ್ಷಗಾನ ಕಲಾವಿದರು ಸಿನಿಮಾದಲ್ಲಿ ತಮ್ಮ ಅಭಿನಯ ಚತುರತೆಯನ್ನು ತೋರುತ್ತಿದ್ದಾರೆ. ಈಗ ಮತ್ತೊಬ್ಬ ಯಕ್ಷಗಾನ ಕಲಾವಿದ ಕನ್ನಡ ಸಿನಿಮಾದಲ್ಲಿ ಆ್ಯಕ್ಟ್​ ಮಾಡಿದ್ದಾರೆ.

ಯಕ್ಷಗಾನ ಕಲಾವಿದ ಬನ್ನಂಜೆ ಸಂಜೀವ ಸುವರ್ಣ

By

Published : Aug 28, 2019, 11:34 AM IST

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಈಗ ಮತ್ತೊಬ್ಬ ಯಕ್ಷಗಾನ ಕಲಾವಿದ ಅಭಿನಯಿಸಿದ್ದಾರೆ. ಅವರೇ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ.

ಹೌದು ಇವರು ’ಸುಗಂಧಿ’ ಸಿನಿಮಾದಲ್ಲಿ ತಮ್ಮ ಅಭಿನಯ ಚತುರತೆ ತೋರಿಸಿದ್ದು, ಜಿ.ಮೂರ್ತಿ ಈ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಸಂಜೀವ್ ಸುವರ್ಣ, ನಿರ್ದೇಶಕ ಜಿ ಮೂರ್ತಿ ಡಾ.ಶಿವರಾಮ ಕಾರಂತರ ಬಗ್ಗೆ ಸಿನಿಮಾ ಕಥೆ ಮಾಡಿಕೊಂಡಿರುವುದೇ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಎಂದಿದ್ದಾರೆ. ಸಂಜೀವ್ ಸುವರ್ಣ ಅವರ ಯಕ್ಷಗಾನ ಪ್ರಾವಿಣ್ಯತೆ ಬಗ್ಗೆ ಪದವಿ ಪಠ್ಯ ವಿಷಯ ವಸ್ತುವಾಗಿದೆ.

‘ಸುಗಂಧಿ’ ಸಿನಿಮಾಗೆ ನರೇಂದ್ರ ಕುಮಾರ್ ಕೋಟಾ ಬಂಡವಾಳ ಹೂಡಿದ್ದಾರೆ. ಹೆಸರಾಂತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಸಂಗೀತ ಒದಗಿಸಿದ್ದಾರೆ. ಸಂಜೀವ್ ರೆಡ್ಡಿ ಈ ಚಿತ್ರವನ್ನ ಸಂಕಲನ ಮಾಡಿದ್ದಾರೆ. ಸುಗಂಧಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಅರ್ಹತಾ ಪತ್ರ ನೀಡಿದೆ.

ಈ ಹಿಂದೆ 2002 ರಲ್ಲಿ ಪ್ರಖ್ಯಾತ ಯಕ್ಷಗಾನ ವಿಧ್ವಾಂಸ ಕರಮನೆ ಶಂಭು ಹೆಗ್ಡೆ, ಡಾ ವಿಷ್ಣುವರ್ಧನ್​ ಅಭಿನಯಿಸಿ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದ ಸಂಗೀತ, ನೃತ್ಯ, ಹಾಡುಗಳು ತುಂಬಿದ ಸಿನಿಮಾ ‘ಪರ್ವ’ ಸಿನಿಮಾದಲ್ಲಿ ನಟಿಸಿದ್ದರು.

ABOUT THE AUTHOR

...view details