ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದಕ್ಕೆ ನಿರ್ಮಾಪಕ ಬಿ ಸುರೇಶ್ ಅವರೇ ಕಾರಣ ಎನ್ನುತ್ತಿದೆ ಸ್ಯಾಂಡಲ್ವುಡ್ನ ಚಿತ್ರ ಬಳಗ.ಮೂಲತಃ ಕಿರುತೆರೆಯ ನಿರ್ದೇಶಕರಾದ ಬಿ ಸುರೇಶ್ ಅವರು 'ಯಜಮಾನ' ಚಿತ್ರವನ್ನು ನಿರ್ಮಾಣ ಮಾಡಿದ್ದು ಬಾಕ್ಸ್ ಆಫೀಸ್ನಲ್ಲಿ ಇದೀಗ ಸಖತ್ತಾಗಿ ಸದ್ದು ಮಾಡುತ್ತಿದೆ.
ಯಜಮಾನನ ಸಕ್ಸಸ್ಗೆ ಇವರೇ ಕಾರಣವಂತೆ, ಕನ್ನಡದಲ್ಲೇ ತೆರೆಕಂಡ್ರೂ ಹೊರರಾಜ್ಯದಲ್ಲೂ ಹಿಟ್ ಆಗಿದ್ದು ಹೀಗೆ - news kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರ ಇದೀಗ ಸಕ್ಸಸ್ ಕಂಡಿದ್ದು ನಿರ್ಮಾಪಕ ಬಿ ಸುರೇಶ್ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಇಂದು ತಮ್ಮ ಅನುಭವ ಹಂಚಿಕೊಂಡ ಬಿ ಸುರೇಶ್, ಚಿತ್ರದ ಶೂಟಿಂಗ್ ವೇಳೆ ತುಂಬಾ ಶ್ರದ್ಧೆಯಿಂದ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಚಿತ್ರದ ಔಟ್ಪುಟ್ ಚೆನ್ನಾಗಿರಬೇಕಂದ್ರೆ ಅದಕ್ಕೆ ಶ್ರದ್ಧೆ ಮುಖ್ಯ. ಹಾಗಾಗಿ ನಾನು ಚಿತ್ರಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮೊದಲೇ ಮಾಡಿಕೊಂಡಿದ್ದೆ. ಸೆಟ್ಗಳಿಗೆ ಯಾವ ರೀತಿಯ ಬಣ್ಣ ಇರಬೇಕು ಹಾಗೂ ಆ ಸೆಟ್ ಎಷ್ಟು ಅಡಿ ಉದ್ದ ಹಾಗೂ ಅಗಲ ಇರಬೇಕು ಎಂಬ ಮಾಹಿತಿಯನ್ನು ಸಹ ಸಂಗ್ರಹಿಸಿದ್ದೆ. 'ಯಜಮಾನ' ಚಿತ್ರದ ಶೂಟಿಂಗ್ಲ್ಲಿ ಒಳ್ಳೆಯ ಟೀಂ ಸಹ ಇತ್ತ. ಇದರಿಂದಲೇ ಒಳ್ಳೆಯ ಔಟ್ಪುಟ್ ಬಂತು ಎನ್ನುತ್ತಾರೆ ನಿರ್ದೇಶಕ ಬಿ ಸುರೇಶ್.
'ಯಜಮಾನ' ಚಿತ್ರವನ್ನು ವಿಡಿಯೋ ಹೌಸ್ ಬ್ಯಾನರ್ನಡಿ ನಿರ್ಮಾಣ ಮಾಡಿದ್ದು ಚಿತ್ರ ಸಕ್ಸಸ್ ಆದ ಹಿನ್ನೆಲೆ ಇಂದು ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿತ್ತು.