ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಯಜಮಾನ. ಹಾಡುಗಳು ಹಾಗೂ ಟ್ರೇಲರ್ನಿಂದ ಸ್ಯಾಂಡಲ್ವುಡ್ ಸಿನಿಮಾ ಇಂಡಸ್ಟ್ರಿಯಲ್ಲೇ ಮನೆ ಮಾತಾಗುತ್ತಿರುವ ಯಜಮಾನ ಸಿನಿಮಾ ರಿಲೀಸ್ಗೆ ಎರಡು ದಿನಗಳು ಬಾಕಿ ಇದೆ.
ಪೇಟಿಎಂನಲ್ಲಿ ಸಿಗಲಿದೆ ಯಜಮಾನ ಸಿನಿಮಾ ಟಿಕೆಟ್ - ಚಾಲೆಂಜಿಂಗ್ ಸ್ಟಾರ್
ದರ್ಶನ್ , ರಶ್ಮಿಕಾ ಮಂದಣ್ಣ ಅಭಿನಯದ 'ಯಜಮಾನ' ಸಿನಿಮಾ ಬಿಡುಗಡೆಗೆ ಇನ್ನು 2 ದಿನಗಳು ಬಾಕಿ ಇದ್ದು ಟಿಕೆಟ್ಗಳು ಹಾಟ್ ಕೇಕ್ನಂತೆ ಸೋಲ್ಡ್ ಔಟ್ ಆಗುತ್ತಿದೆ. ಇದೀಗ ಪೇಟಿಎಂನಲ್ಲಿ ಕೂಡಾ ಟಿಕೆಟ್ ಲಭ್ಯವಿದೆ.
ದಾಸನ ಅಭಿಮಾನಿಗಳು ಮೊದಲ ದಿನವೇ ಮೊದಲ ಶೋ ನೋಡಲು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಎಲ್ಲೆಡೆ ಮೊದಲ ದಿನ ಆನ್ಲೈನ್ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಇನ್ನು ಚಿತ್ರಮಂದಿರಗಳಲ್ಲಿ ಯಜಮಾನ ಕಟೌಟ್ಗಳು ಆಳೆತ್ತರದಲ್ಲಿ ರಾರಾಜಿಸುತ್ತಿವೆ. ಈಗ ಅಭಿಮಾನಿಗಳಿಗೆ ಯಜಮಾನ ಸಿನಿಮಾ ಟಿಕೆಟ್ ಪೇಟಿಎಂನಲ್ಲಿ ಕೂಡಾ ಸಿಗಲಿದೆ. ಈ ಹಿಂದೆ ಯಶ್ ಕೆಜಿಎಫ್ ಸಿನಿಮಾದ ಟಿಕೆಟ್ ಓಎಲ್ಎಕ್ಸ್ನಲ್ಲಿ ಮಾರಾಟ ಆಗಿತ್ತು. ಈಗ ದರ್ಶನ್ ಅಭಿನಯದ ಯಜಮಾನ ಸಿನಿಮಾ ಪೇಟಿಎಂನಲ್ಲಿ ಮಾರಾಟ ಆಗುತ್ತಿದೆ. ಇದರಿಂದ ದಚ್ಚು ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಸಿಗಲಿದೆ.
ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ಅಡಿ ಶೈಲಜಾನಾಗ್ ಹಾಗೂ ಬಿ.ಸುರೇಶ್ ನಿರ್ಮಾಣದ ಈ ಸಿನಿಮಾವನ್ನು ಪಿ.ಕುಮಾರ್ ಹಾಗೂ ವಿ.ಹರಿಕೃಷ್ಣ ನಿರ್ದೇಶಿಸಿದ್ದಾರೆ. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ದೇವರಾಜ್, ರವಿಶಂಕರ್ ಹಾಗೂ ಇತರರು ಸಿನಿಮಾದ ಪ್ರಮುಖ ತಾರಾಗಣದಲ್ಲಿದ್ದಾರೆ.