ನಿಂತ ನೋಡು ಯಜಮಾನ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಹಾಡಿನ ಸಾಲು. ಅದು ಅಕ್ಷರಶಃ ಸರಿಯಾಗಿದೆ. ‘ಯಜಮಾನ’ ದಿ ಬಾಸ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ, ನಿರ್ಮಾಪಕಿ ಶೈಲಜಾ ಸುರೇಶ್ ಅವರ ಸಿನಿಮಾ 100ನೇ ದಿವಸಕ್ಕೆ ಮೊನ್ನೆ ಕಾಲಿಟ್ಟಿದೆ. ಈ ಚಿತ್ರ ಮಾರ್ಚ್ 1 ರಂದು ಬಿಡುಗಡೆಯಾಗಿತ್ತು.
‘ಯಜಮಾನ’ 100 ದಿವಸಕ್ಕೆ ಕಾಲಿಟ್ಟಿರುವುದು ಜಂಟಿ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಬಹಳ ಸ್ಪೆಷಲ್. ಅವರು 100 ಕನ್ನಡ ಸಿನಿಮಾಗಳ ಸಂಗೀತ ನಿರ್ದೇಶಕರೂ ಕೂಡ. ಪೋನ್ ಕುಮಾರ್ ಜೊತೆ ಸೇರಿಕೊಂಡು ವಿ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ.ವಿ. ಹರಿಕೃಷ್ಣ ಅವರ ಸಂಗೀತದಲ್ಲಿ ಶೀರ್ಷಿಕೆ ಗೀತೆ, ಬಸಣ್ಣೀ ಬಾ.... ಒಂದು ಮುಂಜಾನೆ... ಅತ್ಯಂತ ಜನಪ್ರಿಯತೆ ಸಹ ಪಡೆದುಕೊಂಡಿವೆ. ಈ ಚಿತ್ರಕ್ಕೆ ಶ್ರೀಶ ಕೂಡ ಛಾಯಾಗ್ರಹಣ ಮಾಡಿರುವರು.