ಸಾಮಾನ್ಯವಾಗಿ ಸೆಲಬ್ರಿಟಿಗಳ ಮದುವೆ ಎಂದರೆ ಕೆಲವು ತಿಂಗಳ ಮುನ್ನವೇ ಸುದ್ದಿಯಾಗಿ ಬಿಡುತ್ತದೆ. ಆದರೆ ಸ್ಯಾಂಡಲ್ವುಡ್ ನಟಿ ಯಜ್ಞಾಶೆಟ್ಟಿ ಸ್ಯಾಂಡಲ್ವುಡ್ನ ಕೆಲವು ಸ್ನೇಹಿತರನ್ನು ಆಹ್ವಾನಿಸಿ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಜ್ಞಾಶೆಟ್ಟಿ, ಸ್ಯಾಂಡಲ್ವುಡ್ ಗಣ್ಯರಿಂದ ಶುಭ ಹಾರೈಕೆ - ಯಜ್ಞಾಶೆಟ್ಟಿ ಸಂದೀಪ್ ಶೆಟ್ಟಿ ಮದುವೆ
ಸ್ಯಾಂಡಲ್ವುಡ್ ನಟಿ ಯಜ್ಞಾಶೆಟ್ಟಿ ಅವರು ಮಂಗಳೂರು ಮೂಲದ ಸಂದೀಪ್ ಶೆಟ್ಟಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಂದೀಪ್ ಶೆಟ್ಟಿ ಬ್ಯುಸಿನೆಸ್ ಜೊತೆಗೆ ನಟ ಕೂಡಾ ಆಗಿದ್ದು, ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಎದ್ದೇಳು ಮಂಜುನಾಥ, ಸುಗ್ರೀವ, ಕಳ್ಳ ಮಳ್ಳ ಸುಳ್ಳ, ಉಳಿದವರು ಕಂಡಂತೆ, ಲಕ್ಷ್ಮೀಸ್ ಎನ್ಟಿಆರ್, ಸೇರಿ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಯಜ್ಞಾಶೆಟ್ಟಿ ನಟಿಸಿದ್ದಾರೆ. ಇತ್ತೀಚೆಗೆ ಯಜ್ಞಾ, ತೆಲುಗು ಸ್ಟಾರ್ ಬಾಲಕೃಷ್ಣ ಜೊತೆ ಕೂಡಾ ಮಿಂಚಿದ್ದರು. ಮಂಗಳೂರು ಮೂಲದ ಸಂದೀಪ್ ಶೆಟ್ಟಿ ಜೊತೆ ಯಜ್ಞಾಶೆಟ್ಟಿ ಸಪ್ತಪದಿ ತುಳಿದಿದ್ದಾರೆ. ಇಂದು ಮಂಗಳೂರಿನ ಅಡ್ಯೂರ್ ಗಾರ್ಡನ್ ಸಭಾಂಗಣದಲ್ಲಿ ಯಜ್ಞಾಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಮದುವೆ ಜರುಗಿದೆ. ಮುಂಬೈನಲ್ಲಿ ಬ್ಯುಸ್ನೆಸ್ ಮಾಡುತ್ತಿರುವ ಸಂದೀಪ್ ಶೆಟ್ಟಿ ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಈ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.