ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಬಂದಿರುವ ಮುನಿರತ್ನ ಕೂಡ ಒಬ್ಬರು. ಪ್ರತಿ ವರ್ಷದಂದು ಶಿವರಾತ್ರಿಯಂದು ತಮ್ಮ ರಾಜರಾಜೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತ್ತಿಕೆರೆಯಲ್ಲಿ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದಾರೆ ಮುನಿರತ್ನ.
ಮುನಿರತ್ನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ - ಕುರುಕ್ಷೇತ್ರ 100 ದಿನದ ಕಾರ್ಯಕ್ರಮ ಏರ್ಪಡಿಸಿದ್ದ ಮುನಿರತ್ನ
ಈ ವರ್ಷ ಕೂಡಾ ಮುನಿರತ್ನ ಮತ್ತಿಕೆರೆ ಜೆ.ಪಿ. ಪಾರ್ಕಿನಲ್ಲಿ ಆ ಭಾಗದ ಜನರಿಗಾಗಿ ಮನರಂಜನಾ ಕಾರ್ಯಕ್ರಮದ ಜೊತೆಗೆ 'ಕುರುಕ್ಷೇತ್ರ' ಸಿನಿಮಾದ ನೂರು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು ಮುನಿರತ್ನ.
ಈ ವರ್ಷ ಕೂಡಾ ಮುನಿರತ್ನ ಮತ್ತಿಕೆರೆ ಜೆ.ಪಿ. ಪಾರ್ಕಿನಲ್ಲಿ ಆ ಭಾಗದ ಜನರಿಗಾಗಿ ಮನರಂಜನಾ ಕಾರ್ಯಕ್ರಮದ ಜೊತೆಗೆ 'ಕುರುಕ್ಷೇತ್ರ' ಸಿನಿಮಾದ ನೂರು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು ಮುನಿರತ್ನ. ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಬಿಎಸ್ವೈ ಯಾವುದೇ ತಲೆ ಬಿಸಿ ಇಲ್ಲದೆ ಸತತ ಒಂದು ಗಂಟೆ ಕುಳಿತು ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಈ ವೇಳೆ ಮುನಿರತ್ನ ಸಿಎಂ ಯಡಿಯೂರಪ್ಪ ಕಾರ್ಯ ವೈಖರಿ ಬಗ್ಗೆ ತಯಾರಿಸಿದ ಕಿರುಚಿತ್ರವನ್ನು ಅವರ ಮುಂದೆ ಪ್ರದರ್ಶಿಸಿದರು. ಕಾರ್ಯಕ್ರಮ ವೀಕ್ಷಿಸಿದ ಬಳಿಕ ಸಿಎಂ, ಕುರುಕ್ಷೇತ್ರ ಸಿನಿಮಾ ಕಲಾವಿದರಿಗೆ ಸನ್ಮಾನ ಮಾಡಿದರು. ಇದು ಮುನಿರತ್ನ ಸಂತೋಷಕ್ಕೆ ಕಾರಣವಾಗಿದ್ದಂತೂ ನಿಜ. ನಂತರ ಮಾತನಾಡಿದ ಸಿ ಎಂ ಮುನಿರತ್ನ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.