ಕರ್ನಾಟಕ

karnataka

ETV Bharat / sitara

'ಯದಾ ಯದಾಹಿ ಧರ್ಮಸ್ಯ' ಆಡಿಯೋ ಬಿಡುಗಡೆ: 29 ಕ್ಕೆ ಸಿನಿಮಾ ತೆರೆಗೆ - undefined

'ಯದಾ ಯದಾಹಿ ಧರ್ಮಸ್ಯ' ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದ್ದು ನಿನ್ನೆ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿದೆ. ಲಹರಿ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ.

'ಯದಾ ಯದಾಹಿ ಧರ್ಮಸ್ಯ'

By

Published : Mar 24, 2019, 4:52 PM IST

ಸ್ಯಾಂಡಲ್​​​​ವುಡ್​​ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ 'ಯದಾ ಯದಾಹಿ ಧರ್ಮಸ್ಯ' ಸಿನಿಮಾ ಸೆಟ್ಟೇರಿ ಬರೋಬ್ಬರಿ ಎರಡೂವರೆ ವರ್ಷಗಳಾಗಿದ್ದು ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಕೊನೆಗೂ ಚಿತ್ರೀಕರಣ ಮುಗಿಸಿ ಮುಂದಿನವಾರ ರಿಲೀಸ್​​​​ಗೆ ರೆಡಿಯಾಗಿದೆ.

'ಯದಾ ಯದಾಹಿ ಧರ್ಮಸ್ಯ' ಚಿತ್ರದ ಆಡಿಯೋ ಬಿಡುಗಡೆ

ನಿನ್ನೆ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮಾಸ್ ಲುಕ್​​​​​​​​​​​​​​ನಲ್ಲಿ ಮಿಂಚಿದ್ದು ವಿಜಯ್ ಜೊತೆಗೆ ಶ್ರಾವ್ಯ ತೆರೆ ಹಂಚಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ನೆಗೆಟಿವ್ ಶೇಡ್​​​​​ನಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ವಿಶೇಷ. ಸಾಯಿಕುಮಾರ್ ಈ ಪಾತ್ರದಲ್ಲಿ ನಟಿಸಲು ಚಿತ್ರದ ಕಥೆಯೇ ಕಾರಣವಂತೆ.

ವಿರಾಜ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ಭೂಗತ ಲೋಕದ ಕಥೆಯಾಗಿದ್ದು ವಿಜಯ್ ರಾಘವೇಂದ್ರ ಇದೇ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶಿಸಿದ್ದಾರೆ. ಲಹರಿ ಸಂಸ್ಥೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಅಕ್ಷರ ಪ್ರೊಡಕ್ಷನ್ ಬ್ಯಾನರ್ ಅಡಿ ಅಕ್ಷರ ತಿವಾರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ಮೈಸೂರು ಟಾಕಿಸ್ ಮೂಲಕ ಇದೇ ತಿಂಗಳ 29 ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

For All Latest Updates

TAGGED:

ABOUT THE AUTHOR

...view details