ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ, ಅವರ ಮೂವರು ಪುತ್ರಿಯರೇ ನಟಿಸಿರುವ 'ಯಾನ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಮಲಯಾಳಂ ಭಾಷೆಗೆ ಡಬ್ಬಿಂಗ್ ರೈಟ್ಸ್ ಕೂಡಾ ಸೇಲ್ ಆಗಿತ್ತು. ಸಿನಿಮಾವು ದಿನದಿಂದ ದಿನಕ್ಕೆ ಪ್ರೇಕ್ಷಕವರ್ಗವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಚಿತ್ರತಂಡ ಫುಲ್ ಖುಷ್ ಆಗಿದೆ.
'ಯಾನ' ಯಶಸ್ವಿ ಪ್ರದರ್ಶನ..ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದ ಚಿತ್ರತಂಡ - undefined
ಕಳೆದ ವಾರ ಬಿಡುಗಡೆಯಾದ 'ಯಾನ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡ ಸಿನಿಪ್ರಿಯರಿಗೆ ಧನ್ಯವಾದ ತಿಳಿಸಿದೆ. ಇದೇ ತಿಂಗಳು 26 ರಂದು ಮಲಯಾಳಂ ಡಬ್ ಸಿನಿಮಾ ಬಿಡುಗಡೆಯಾಗುತ್ತಿದ್ದು ಚಿತ್ರತಂಡ ಪ್ರಮೋಷನ್ಗಾಗಿ ಕೇರಳ ಕಡೆ ಪ್ರಯಾಣ ಬೆಳೆಸುತ್ತಿದೆ.
ಈ ಸಂತೋಷವನ್ನು ಹಂಚಿಕೊಳ್ಳಲು ಚಿತ್ರತಂಡ ಸಕ್ಸಸ್ ಪ್ರೆಸ್ಮೀಟ್ ಕರೆದು ಮಾಧ್ಯಮಗಳ ಜೊತೆ ತಮ್ಮ ಖುಷಿ ಹಂಚಿಕೊಂಡಿತು. ಚಿತ್ರತಂಡ ಮೊದಲು ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ತಿಳಿಸಿತು. ಮೂವರು ಹೆಣ್ಣುಮಕ್ಕಳ ಲೈಫ್ಸ್ಟೋರಿಯನ್ನು ಚಿತ್ರ ಒಳಗೊಂಡಿದೆ. ಬಹುತೇಕ ಎಲ್ಲರೂ ಹೊಸಬರೇ ತುಂಬಿರುವುದರಿಂದ ಚಿತ್ರ ಹೇಳಿಕೊಳ್ಳುವಂತ ಓಪನಿಂಗ್ ಪಡೆದಿರಲಿಲ್ಲ. ಆದರೆ ಇದೀಗ ಚಿತ್ರವನ್ನು ನೋಡಲು ಜನರು ಥಿಯೇಟರ್ ಕಡೆ ಮುಖ ಮಾಡಿದ್ದಾರೆ. ಅಲ್ಲದೆ ಸಿನಿಮಾ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ನಿರ್ದೇಶಕಿ ಹೇಳಿದ್ದಾರೆ.
ಆರಂಭದಲ್ಲಿ ನಾವು ಕೇವಲ 40-45 ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವಂತೆ ವಿತರಕರಿಗೆ ಹೇಳಿದ್ದೆವು. ಆದರೆ ಅವರು ರಾಜ್ಯಾದ್ಯಂತ ಸುಮಾರು 90 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದು ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡರು. ಅಲ್ಲದೆ ಇದೇ 26ರಂದು 'ಯಾನ' ಮಲಯಾಳಂ ಡಬ್ಬಿಂಗ್ ಕೇರಳದ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಮುಂದಿನ ವಾರ ನಾವು ಚಿತ್ರದ ಪ್ರಮೋಷನ್ಗಾಗಿ ಕೇರಳ ಹೋಗುತ್ತಿರುವುದಾಗಿ ವಿಜಯಲಕ್ಷ್ಮಿ ಸಿಂಗ್ ತಿಳಿಸಿದರು.