ಕರ್ನಾಟಕ

karnataka

ETV Bharat / sitara

ಬರೀ ಟ್ರೈಲರ್ ವೀಕ್ಷಣೆಗೆ 25 ರೂ. ಶುಲ್ಕವಿಟ್ಟ ರಾಮ್ ಗೋಪಾಲ್ ವರ್ಮಾ: ಅಂಥದ್ದೇನಿದೆ ಇದರಲ್ಲಿ? - ವಿಶ್ವದ ಮೊದಲ ಪಾವತಿ ಟ್ರೈಲರ್

ಸಾಮಾನ್ಯವಾಗಿ ಚಲನಚಿತ್ರ ಮಂದಿರಗಳಲ್ಲಿ ಅಥವಾ ಒಟಿಟಿಯಲ್ಲಿ ಸಿನಿಮಾ ವೀಕ್ಷಣೆಗೆ ಶುಲ್ಕ ವಿಧಿಸುವುದು ವಾಡಿಕೆ. ಆದರೆ, ಆರ್​ಜಿವಿ ಮಾತ್ರ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಸಿನಿಮಾ ಟ್ರೈಲರ್ ವಿಕ್ಷಣೆಗೆಂದೇ ಶುಲ್ಕ ವಿಧಿಸುತ್ತಿದ್ದಾರೆ. ಆ ಟ್ರೈಲರ್​ನಲ್ಲಿ ಅಂಥದ್ದು ಏನಿದೆ ಎಂಬುದನ್ನು ತಿಳಿಯಬೇಕಾದರೆ ಜುಲೈ 22ರವರೆಗೂ ಕಾಯಬೇಕಿದೆ.

POWER STAR
ಪವರ್ ಸ್ಟಾರ್

By

Published : Jul 18, 2020, 8:26 PM IST

ಹೈದರಾಬಾದ್​:ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಟಾಲಿವುಡ್​ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತನ್ನ ಸಿನಿಮಾದ ಟ್ರೈಲರ್​ ಮೂಲಕ ಅವರು ಸದ್ದು ಮಾಡುತ್ತಿದ್ದಾರೆ.

Http://rgvworldtheatre.comನಲ್ಲಿ ಬಿಡುಗಡೆ ಆಗಲಿರುವ 'ಪವರ್​ ಸ್ಟಾರ್​' ಚಲನಚಿತ್ರ ವೀಕ್ಷಣೆಯ ಆನ್‌ಲೈನ್‌ ದರ 150 ರೂ. ಜುಲೈ 25 ಬೆಳಗ್ಗೆ 11ಗಂಟೆಯವರೆಗೆ ಇರುತ್ತದೆ. ಈ ಬಳಿಕ ಟಿಕೆಟ್ ವೆಚ್ಚವನ್ನು 250 ರೂ.ಗೆ ಏರಿಸಲಾಗುವುದು. ಪ್ರೀಮಿಯಂನಲ್ಲಿ ಮೊದಲೇ ಬುಕ್ ಮಾಡಿದರೆ ಮತ್ತು ಬಿಡುಗಡೆ ಆಗುವವರೆಗೆ ಕಾಯದಿದ್ದರೆ ನೀವು 100 ರೂ. ಉಳಿಸಬಹುದು ಎಂದು ಆರ್​ಜಿವಿ ಟ್ವೀಟ್ ಮಾಡಿದ್ದಾರೆ.

'ಪವರ್ ಸ್ಟಾರ್​' ಚಲನಚಿತ್ರವು ಜುಲೈ 25ರ 11ರಂದು http://rgvworldtheatre.comನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಟ್ರೈಲರ್ ಜುಲೈ 22ರ ಬೆಳಗ್ಗೆ 11ರಂದು ಪ್ರದರ್ಶನಗೊಳ್ಳಲಿದೆ. ಅದೇ ಸಮಯದಲ್ಲಿ ಪೂರ್ಣ ಮುಂಗಡ ಕಾಯ್ದಿರಿಸುವಿಕೆ ಪೂರ್ಣಗೊಳ್ಳುತ್ತದೆ. ಚಲನಚಿತ್ರದ ಪ್ರತಿ ಟಿಕೆಟ್‌ಗೆ 150 ರೂ. ಜೊತೆಗೆ ಜಿಎಸ್‌ಟಿ ಸಹ ಸೇರಿರುತ್ತದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಸಿನಿಮಾದ ಪೋಸ್ಟರ್​ನಲ್ಲಿ ವಿಶ್ವದ ಪ್ರಥಮ ಪಾವತಿ ಶುಲ್ಕ ಟ್ರೈಲರ್​. ಪ್ರತಿ ವೀಕ್ಷಣೆಗೆ 25 ರೂ. ದರ ನಿಗದಿಪಡಿಸಲಾಗಿದೆ. ಜುಲೈ 22ರ ಬೆಳಗ್ಗೆ 11 ಗಂಟೆಗೆ ಬಿಡುಗಡೆ ಆಗಲಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ABOUT THE AUTHOR

...view details