ಕರ್ನಾಟಕ

karnataka

ETV Bharat / sitara

ಚರ್ಚೆಗೆ ಕಾರಣವಾಯ್ತು ದರ್ಶನ್ ಟ್ವೀಟ್​​.. ಯಾವ ಸೆಲಬ್ರಿಟಿಗೆ ಚಾಲೆಂಜ್ ಮಾಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್​​..? - undefined

'ಕುರುಕ್ಷೇತ್ರ' ಆಡಿಯೋ ಬಿಡುಗಡೆ ಪಾಸ್​​ನಲ್ಲಿ ದರ್ಶನ್ ಫೋಟೋ ಇಲ್ಲ ಎಂಬ ವಿಚಾರ 2 ದಿನಗಳ ಹಿಂದೆ ಸುದ್ದಿಯಾಗಿತ್ತು. ಇದೀಗ ದರ್ಶನ್ ಇಂದು ಮಾಡಿರುವ ಟ್ವೀಟ್ ಒಂದು ಸ್ಯಾಂಡಲ್​ವುಡ್​​​​​ನಲ್ಲಿ ಚರ್ಚೆಗೆ ಕಾರಣವಾಗಿದೆ.

ಚಾಲೆಂಜಿಂಗ್ ಸ್ಟಾರ್

By

Published : Jul 2, 2019, 10:17 AM IST

Updated : Jul 2, 2019, 12:36 PM IST

ಜುಲೈ 7ರಂದು ಕನ್ನಡದ ಬಹುನಿರೀಕ್ಷಿತ ಚಿತ್ರ 'ಕುರುಕ್ಷೇತ್ರ' ಆಡಿಯೋ ಬಿಡುಗಡೆಯಾಗುತ್ತಿದೆ. ಕಾರ್ಯಕ್ರಮದ ಪಾಸ್ ಮೇಲೆ ದರ್ಶನ್ ಫೋಟೋ ಇಲ್ಲ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಕೋಪಗೊಂಡಿದ್ದರು. ಸ್ವತ: ದರ್ಶನ್ ಮಧ್ಯೆ ಬಂದು ಈ ವಿಚಾರವನ್ನು ತಿಳಿಗೊಳಿಸಿದ್ದರು.

ಆದರೆ, ಇಂದು ದರ್ಶನ್ ಮಾಡಿರುವ ಟ್ವೀಟ್ ಒಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಚಾಲೆಂಜಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ನಟ ದರ್ಶನ್ ಬೇರೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಾಡುತ್ತಿದ್ದಾರೆ. ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅವರೇ ಹೇಳಿಕೊಂಡಿದ್ದಾರೆ. 'ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಒಪನ್ ಚಾಲೆಂಜ್, ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ, ಬಂದಾಗ ಎಲ್ಲಾನೂ ತಿಳಿಸುತ್ತೇನೆ, ನಿಮ್ಮ ದಾಸ ದರ್ಶನ್' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್​

ದರ್ಶನ್ ಅವರ ಟ್ವೀಟ್ ನೋಡಿದ ನಂತರ ಸ್ಯಾಂಡಲ್​ವುಡ್​​​ನಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ. ವಿಷಯ ಏನೆಂದು ತಿಳಿಯಲು ಮಧ್ಯಾಹ್ನದವರೆಗೂ ಕಾಯಲೇಬೇಕು. ಕುರುಕ್ಷೇತ್ರದ ಧುರ್ಯೋಧನ ಯಾವ ಸೆಲೆಬ್ರಿಟಿ ವಿರುದ್ಧ ಯಾವ ರೀತಿ ತೊಡೆ ತಟ್ಟಲು ಸಿದ್ಧರಿದ್ದಾರೋ ಕಾದು ನೋಡಬೇಕು.

Last Updated : Jul 2, 2019, 12:36 PM IST

For All Latest Updates

TAGGED:

ABOUT THE AUTHOR

...view details