ಕರ್ನಾಟಕ

karnataka

ETV Bharat / sitara

ಸ್ಟಾರ್‌ ಆ್ಯಂಕರ್‌ ಶೀತಲ್‌ ಮೊದಲು ಸ್ಟಾರ್ಟ್‌-ಕಟ್‌ ಹೇಳಿದ 'ವಿಂಡೋ ಸೀಟ್'​​​ ಟೀಸರ್​​ ಔಟ್​​.. - Window Seat Cinema Teaser directed by Sheetal Shetty

ಚಿತ್ರದಲ್ಲಿ ನಿರೂಪ್​ ಬಂಡಾರಿ ಗಿಟಾರ್​​ ವಾದಕನ ಪಾತ್ರ ನಿರ್ವಹಿಸಿದ್ದಾರೆ. ಟೀಸರ್​​​ ನೋಡಿದಾಗ ಮಲೆನಾಡಿನ ಒಂದಷ್ಟು ಪರಿಸರ ಹಾಗೂ ಅಲ್ಲಿನ ಜನರ ಜೀವನವನ್ನು ಕಟ್ಟಿಕೊಡಲಾಗಿದೆ ಅನ್ನಿಸುತ್ತದೆ..

Window Seat Teaser Out
ಶೀತಲ್​ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್'​​​ ಟೀಸರ್​​ ಔಟ್​​

By

Published : Nov 13, 2020, 7:48 PM IST

ಪಟ ಪಟ ಮಾತನಾಡುತ್ತ ನ್ಯೂಸ್​ ಕೇಳುಗರನ್ನು ಆನಂದಿಸುತ್ತಿದ್ದ ಶೀತಲ್​​ ಶೆಟ್ಟಿ ಚೊಚ್ಚಲ ಬಾರಿಗೆ ನಿರ್ದೇಶಕರ ಕ್ಯಾಪ್​ ತೊಟ್ಟು ಚಿತ್ರವೊಂದಕ್ಕೆ ಆ್ಯಕ್ಷನ್​-ಕಟ್​​ ಹೇಳುತ್ತಿರುವುದು ಎಲ್ಲರಿಗೂ ಗೊತ್ತಿದೆ.

'ವಿಂಡೋ ಸೀಟ್'​​ ಸಿನಿಮಾಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಶೀತಲ್​​​​ ಶೆಟ್ಟಿ ಅಂತೂ ಇಂದು ಚಿತ್ರದ ಟೀಸರ್​​ ಅನ್ನು ಹೊರ ತಂದಿದ್ದಾರೆ.

ವಿಂಡೋ ಸೀಟ್​​ ಚಿತ್ರದ ಟೀಸರ್​ ಇಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ನಿರೂಪ್​ ಬಂಡಾರಿ ಜೊತೆ ಅಮೃತಾ ಅಯ್ಯರ್​ ಮತ್ತು ಸಂಜನಾ ಆನಂದ್​​ ಮುಖ್ಯ ಪಾತ್ರದಲ್ಲಿ ಕಾಣಿಸಿದ್ದಾರೆ. ಇದೀಗ ಬಿಡುಗಡೆಯಾಗಿರುವ ಟೀಸರ್​ ಗಮನಸಿದಾಗ ಇದೊಂದು ಪಕ್ಕಾ ರೊಮ್ಯಾಂಟಿಕ್​​​ ಥ್ರಿಲ್ಲರ್​ ಸಿನಿಮಾ ಎಂಬುದು ತಿಳಿಯುತ್ತದೆ.

ಚಿತ್ರದಲ್ಲಿ ನಿರೂಪ್​ ಬಂಡಾರಿ ಗಿಟಾರ್​​ ವಾದಕನ ಪಾತ್ರ ನಿರ್ವಹಿಸಿದ್ದಾರೆ. ಟೀಸರ್​​​ ನೋಡಿದಾಗ ಮಲೆನಾಡಿನ ಒಂದಷ್ಟು ಪರಿಸರ ಹಾಗೂ ಅಲ್ಲಿನ ಜನರ ಜೀವನವನ್ನು ಕಟ್ಟಿಕೊಡಲಾಗಿದೆ ಅನ್ನಿಸುತ್ತದೆ.

ಸಿನಿಮಾದಲ್ಲಿ ರವಿಶಂಕರ್​​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್​ ಕೂಡ ಒಂದು ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಜಾಕ್​ ಮಂಜು ಬಂಡವಾಳ ಹಾಕಿದ್ದಾರೆ.

ABOUT THE AUTHOR

...view details