ಕರ್ನಾಟಕ

karnataka

ETV Bharat / sitara

ಚಿರಂಜೀವಿ ಸರ್ಜಾ ನಟಿಸಬೇಕಿದ್ದ 'ಏಪ್ರಿಲ್' ಚಿತ್ರಕ್ಕೆ ಯಾರಾಗಲಿದ್ದಾರೆ ನಾಯಕ...? - Rachita ram starring April movie

ಸತ್ಯರಾಯಲ ನಿರ್ದೇಶನದ 'ಏಪ್ರಿಲ್' ಚಿತ್ರಕ್ಕೆ ಚಿರಂಜೀವಿ ಸರ್ಜಾ ಬದಲಿಗೆ ಬೇರೆ ಯಾವ ನಾಯಕನನ್ನೂ ಆಯ್ಕೆ ಮಾಡಿಕೊಳ್ಳುವುದು ಬೇಡ ಎಂದು ಅವರು ನಿರ್ಧರಿಸಿದ್ದಾರೆ. ಬದಲಿಗೆ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಚಿತ್ರವನ್ನು ಮಹಿಳಾ ಪ್ರಧಾನ ಸಿನಿಮಾವನ್ನಾಗಿ ಮಾಡಲು ಹೊರಟಿದ್ದಾರೆ.

April movie poster
ಚಿರಂಜೀವಿ ಸರ್ಜಾ

By

Published : Jul 27, 2020, 10:24 AM IST

Updated : Jul 27, 2020, 10:31 AM IST

ಕನ್ನಡ ಚಿತ್ರರಂಗ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ಇಂದಿಗೂ ದುಖ:ದಲ್ಲಿದೆ. ಅವರು ಒಪ್ಪಿಕೊಂಡಿದ್ದ ಸಿನಿಮಾಗಳಲ್ಲಿ ಸತ್ಯರಾಯಲ ನಿರ್ದೇಶನದ 'ಏಪ್ರಿಲ್' ಸಿನಿಮಾ ಕೂಡಾ ಒಂದು. ಆದರೆ ದುರದೃಷ್ಟವಶಾತ್ ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇಲ್ಲ.

'ಏಪ್ರಿಲ್​' ಚಿತ್ರದ ಪೋಸ್ಟರ್​

ಏಪ್ರಿಲ್ ಸಿನಿಮಾದ ಫೋಟೋಶೂಟ್ ಬಹಳ ದಿನಗಳ ಹಿಂದೆಯೇ ನಡೆದಿತ್ತು. ಚಿರಂಜೀವಿ ಸರ್ಜಾಗೆ ರಚಿತಾ ರಾಮ್ ನಾಯಕಿಯಾಗಿ ನಟಿಸಬೇಕಿತ್ತು. ಏಪ್ರಿಲ್ ಚಿತ್ರದ ಪೋಸ್ಟರ್​​​​​ ಕೂಡಾ ಬಿಡುಗಡೆಯಾಗಿತ್ತು. ಈ ಪೋಸ್ಟರ್​​ನಲ್ಲಿ ರಚಿತಾ ರಾಮ್​ ಫೋಟೋ ಕೆಳಗೆ ಮಿಸ್ಸಿಂಗ್ ಎಂದು ಬರೆಯಲಾಗಿತ್ತು. ಚಿರಂಜೀವಿ ಸರ್ಜಾ ಕೂಡಾ 16 ಜನವರಿ 2020 ರಂದು ಈ ಚಿತ್ರದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಸಿನಿಮಾದಲ್ಲಿ ನಟಿಸಲು ಇಂದು ಚಿರು ನಮ್ಮೊಂದಿಗೆ ಇಲ್ಲ.

ರಚಿತಾ ರಾಮ್

ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಬದಲಿಗೆ ಬೇರೆ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ ನಿರ್ದೇಶಕ ಸತ್ಯರಾಯಲ ಚಿರು ಬದಲಿಗೆ ಬೇರೆ ಯಾರನ್ನೂ ಆಯ್ಕೆ ಮಾಡುವುದು ಬೇಡ ಎಂದು ನಿರ್ಧರಿಸಿದ್ಧಾರೆ. ಸ್ಕ್ರಿಪ್ಟ್​​​​ನಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಇದನ್ನು ನಾಯಕಿ ಪ್ರಧಾನ ಸಿನಿಮಾವನ್ನಾಗಿ ಮಾಡಲು ತೀರ್ಮಾನ ಕೈಗೊಂಡಿದ್ದು ಚಿತ್ರಕ್ಕೆ ಮರುಚಾಲನೆ ನೀಡಿದ್ದಾರೆ. ಈ ಮೂಲಕ 'ಏಪ್ರಿಲ್' ಸಂಪೂರ್ಣ ಜವಾಬ್ದಾರಿ ರಚಿತಾ ರಾಮ್ ಹೆಗಲ ಮೇಲೆ ಬಿದ್ದಿದೆ.

ಚಿತ್ರಕ್ಕೆ ಪ್ರತೀಕ್ ಶೆಟ್ಟಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಇದೆ. ಈ ಕೊರೊನಾ ಹಾವಳಿ ಮುಗಿಯುತ್ತಿದ್ದಂತೆ 'ಏಪ್ರಿಲ್' ಚಿತ್ರೀಕರಣ ಆರಂಭವಾಗಲಿದೆ.

Last Updated : Jul 27, 2020, 10:31 AM IST

ABOUT THE AUTHOR

...view details