ಕರ್ನಾಟಕ

karnataka

ETV Bharat / sitara

ಮಿಸೆಸ್ ಸೌತ್​ ಇಂಡಿಯಾ ಆಗಲು ಮತ್ತೊಂದು ಅವಕಾಶ: ವೈಲ್ಡ್ ಕಾರ್ಡ್ ಪ್ರವೇಶ - MRS south India latest updates

ಮಿಸೆಸ್ ಹಾಗೂ ಮಿಸ್ ಸೌತ್ ಇಂಡಿಯಾ ಐ ಆಮ್ ಪವರ್​ಫುಲ್​ ಆಡಿಷನ್‍ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕೆಲವು ಸ್ಪರ್ಧಿಗಳಿಗೆ ನೇರವಾಗಿ ಫೈನಲ್‍ಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಗಲಿದೆ.

Wild Card  entry to Mrs South India
ಮಿಸೆಸ್ ಸೌತ್ ಇಂಡಿಯಾಗೆ ವೈಲ್ಡ್ ಕಾರ್ಡ್ ಪ್ರವೇಶ

By

Published : Mar 26, 2021, 9:37 AM IST

ಬೆಂಗಳೂರು: ಮಿಸೆಸ್ ಹಾಗೂ ಮಿಸ್ ಸೌತ್ ಇಂಡಿಯಾ ಐ ಆಮ್ ಪವರ್​ಫುಲ್​ ವೇದಿಕೆಯ ಆಡಿಷನ್‍ನಲ್ಲಿ ಭಾಗವಹಿಸಲು ಸಾಧ್ಯವಾಗದ ಸ್ಪರ್ಧಿಗಳಿಗೆ ಈಗ ಮತ್ತೊಂದು ಸುವರ್ಣ ಅವಕಾಶ ಸಿಕ್ಕಿದೆ.

ಮಿಸೆಸ್ ಸೌತ್ ಇಂಡಿಯಾಗೆ ವೈಲ್ಡ್ ಕಾರ್ಡ್ ಪ್ರವೇಶ
ಆಡಿಷನ್‍ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕೆಲವು ಸ್ಪರ್ಧಿಗಳಿಗೆ ನೇರವಾಗಿ ಫೈನಲ್‍ಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಗಲಿದೆ. ಈ ಬಗ್ಗೆ ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ಮಾಹಿತಿ ನೀಡಿದ್ದಾರೆ.
ಮಿಸೆಸ್ ಸೌತ್ ಇಂಡಿಯಾಗೆ ವೈಲ್ಡ್ ಕಾರ್ಡ್ ಪ್ರವೇಶ
'ಫೆಬ್ರುವರಿ 21ರಂದು ನಡೆದ ಆಡಿಷನ್‍ನಲ್ಲಿ 30ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ 10 ಸ್ಪರ್ಧಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಇನ್ನೂ ಹತ್ತು ಸ್ಪರ್ಧಿಗಳಿಗೆ ವೈಲ್ಡ್ ಕಾರ್ಡ್ ಪ್ರವೇಶ ಸಿಗುವ ಸಾಧ್ಯತೆ ಇದೆ' ಎಂದು ನಂದಿನಿ ಹೇಳಿದ್ದಾರೆ.
ಮಿಸೆಸ್ ಸೌತ್ ಇಂಡಿಯಾಗೆ ವೈಲ್ಡ್ ಕಾರ್ಡ್ ಪ್ರವೇಶ
ಮೇ ತಿಂಗಳಿನಲ್ಲಿ ನಡೆಯುವ ಮಿಸ್ ಹಾಗೂ ಮಿಸೆಸ್ ಇಂಡಿಯಾ ಐ ಆಮ್ ಪವರ್​ಫುಲ್ ವೇದಿಕೆಯಲ್ಲಿ ಮಿಸ್ಟರ್ ಸೌತ್ ಇಂಡಿಯಾ, ಮಿಸೆಸ್ ಕರ್ವಿ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ. ಇಲ್ಲಿ ಗೆದ್ದ ಸ್ಪರ್ಧಿಗಳು ಸಿಂಗಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.18 ರಿಂದ 55ವರ್ಷದೊಳಗಿನ ಸ್ಪರ್ಧಿಗಳಿಗೆ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ. ಪಾಲ್ಗೊಳ್ಳಲು ಇಚ್ಛಿಸುವ ಆಕಾಂಕ್ಷಿಗಳು 9901755163 ಗೆ ಕರೆ ಮಾಡಬಹುದು.

ABOUT THE AUTHOR

...view details