ಕರ್ನಾಟಕ

karnataka

By

Published : Feb 14, 2020, 9:50 PM IST

ETV Bharat / sitara

ಆತ್ಮೀಯ ಗೆಳೆಯ ತರುಣ್ ಸುಧೀರ್ ಜೊತೆ ಶರಣ್ ಮಾತು ಬಿಟ್ಟಿದ್ರಂತೆ...ಏಕೆ...?

'ಚುಟು ಚುಟು' ಹಾಡಿನ ಚಿತ್ರೀಕರಣದ ವೇಳೆ ಶರಣ್ ಡ್ಯಾನ್ಸ್ ಮಾಡಲು ಬಹಳ ಕಷ್ಟಪಟ್ಟರಂತೆ. ಈ ಹಾಡಿನ ಡ್ಯಾನ್ಸ್ ಪ್ರಾಕ್ಟೀಸ್ ವಿಚಾರವಾಗಿ ಶರಣ್ ಅವರು ತರುಣ್ ಸುಧೀರ್ ಜೊತೆ ಒಂದು ತಿಂಗಳು ಮಾತು ಬಿಟ್ಟಿದ್ದರಂತೆ.

Sharan, Tarun sudheer
ಶರಣ್, ತರುಣ್​ ಸುಧೀರ್

ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮಾಡುತ್ತಾ ಹೀರೋ ಆದ ನಟರಲ್ಲಿ ಶರಣ್ ಕೂಡಾ ಒಬ್ಬರು. 'ರ್‍ಯಾಂಬೋ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾದ ಶರಣ್ ಈಗ ಸ್ಯಾಂಡಲ್​​ ವುಡ್ ಪೈಸಾ ವಸೂಲ್ ಹೀರೋ ಆಗಿ ಬದಲಾಗಿದ್ದಾರೆ.

'ಚುಟು ಚುಟು' ಹಾಡಿನ ಸಕ್ಸಸ್ ಮೀಟ್

ಶರಣ್ ಹೀರೋ ಆದ 100 ನೇ ಸಿನಿಮಾ 'ರ್‍ಯಾಂಬೋ' ಶರಣ್​​ಗೆ ದೊಡ್ಡ ಮಟ್ಟದ ಹೆಸರು ತಂದುಕೊಡ್ತು. ಈ ಯಶಸ್ಸಿನ ಹಿಂದೆ ಇದ್ದ ಆತ್ಮೀಯ ಗೆಳೆಯ ನಿರ್ದೇಶಕ ತರುಣ್ ಸುಧೀರ್. ಶರಣ್ ತಂದೆ ಹಾಗೂ ತರುಣ್ ಸುಧೀರ್ ತಂದೆ ಒಳ್ಳೆಯ ಸ್ನೇಹಿತರಾಗಿದ್ದರು. ಅದೇ ರೀತಿ ಶರಣ್ ಮತ್ತು ನಿರ್ದೇಶಕ ತರುಣ್ ಸುಧೀರ್ ಕೂಡಾ ಸ್ನೇಹಿತರು. ಇದೇ ಸ್ನೇಹದಿಂದ ಈ ಜೋಡಿ ಅಧ್ಯಕ್ಷ, ವಿಕ್ಟರಿ ಹಾಗೂ 'ರ್‍ಯಾಂಬೋ 2' ಸಿನಿಮಾಗಳ‌ನ್ನು ಮಾಡಿ ಸಕ್ಸಸ್ ಆಗಿದ್ದಾರೆ. ಅದಕ್ಕೆ ಸಾಕ್ಷಿ 'ರ್‍ಯಾಂಬೋ 2' ಸಿನಿಮಾ, ಸಕ್ಸಸ್ ಜೊತೆಗೆ 'ಚುಟು ಚುಟು ಹಾಡು' ಬರೋಬ್ಬರಿ 100 ಮಿಲಿಯನ್ ವ್ಯೂವ್ಸ್​​​​​​​​​​​​ ಪಡೆದು, ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುವ ಮೂಲಕ ರೆಕಾರ್ಡ್ ಬರೆದಿತ್ತು.

ಈ 'ಚುಟು ಚುಟು' ಹಾಡಿನ ಸಕ್ಸಸ್ ಖುಷಿಯನ್ನು ಆನಂದ್ ಆಡಿಯೋ ಸಂಸ್ಥೆ ಇತ್ತೀಚೆಗೆ ಹಂಚಿಕೊಂಡಿತು. ಈ ಸಮಾರಂಭದಲ್ಲಿ ಶರಣ್ ಒಂದು ಇಂಟ್ರಸ್ಟಿಂಗ್ ವಿಚಾರ ಹಂಚಿಕೊಂಡರು. 'ಚುಟು ಚುಟು' ಹಾಡಿನ ಚಿತ್ರೀಕರಣದ ವೇಳೆ ಶರಣ್ ಡ್ಯಾನ್ಸ್ ಮಾಡಲು ಬಹಳ ಕಷ್ಟಪಟ್ಟರಂತೆ. ಈ ಹಾಡಿನ ಡ್ಯಾನ್ಸ್ ಪ್ರಾಕ್ಟೀಸ್ ವಿಚಾರವಾಗಿ ಶರಣ್ ಅವರು ತರುಣ್ ಸುಧೀರ್ ಜೊತೆ ಒಂದು ತಿಂಗಳು ಮಾತು ಬಿಟ್ಟಿದ್ದರಂತೆ. ಇನ್ನು ಶರಣ್ ಸಕ್ಸಸ್​​​ನಲ್ಲಿ ರೋರಿಂಗ್​ ಸ್ಟಾರ್​​​​​​​​​​​ ಶ್ರೀಮುರಳಿ ಪಾತ್ರ ಕೂಡಾ ಇದೆಯಂತೆ. ಈ ವಿಚಾರವನ್ನು ಶರಣ್ ಹಾಡಿನ ಸಕ್ಸಸ್ ಮೀಟ್​​ನಲ್ಲಿ ಹೇಳಿಕೊಂಡರು.

For All Latest Updates

TAGGED:

ABOUT THE AUTHOR

...view details