ಮೊನ್ನೆಯಷ್ಟೇ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಮ್ಮ ಮುದ್ದು ಮಗಳಿಗೆ ನಾಮಕರಣ ಮಾಡಿ 'ಐರಾ' ಯಶ್ ಎಂಬ ನಾಮಕರಣ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಮಗುವಿಗೆ ಹಾರೈಸಿ ಶುಭ ಕೋರಿದ್ದಾರೆ.
ಯಶ್ ಮಗಳನ್ನು ಸುಮಲತಾ ಇನ್ನೂ ನೋಡಿಲ್ಲವಂತೆ...ಕಾರಣ ಏನು..? - undefined
ಯಶ್ ಮಗುವನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಒಂದೊಳ್ಳೆ ದಿನ ನೋಡಿ ಮಗುವನ್ನು ನೋಡಲು ಬನ್ನಿ ಎಂದು ಯಶ್ ಹೇಳಿರುವುದಾಗಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಯಶ್ ಮಗುವಿಗೆ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಆ ತೊಟ್ಟಿಲು ಯಶ್ ಮನೆ ಸೇರುವ ಮುನ್ನವೇ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ಯಶ್ ಹಾಗೂ ರಾಧಿಕಾ ದಂಪತಿಗೆ ಅಂಬರೀಶ್ ತಮ್ಮ ಮಗಳನ್ನು ನೋಡಲಿಲ್ಲವಲ್ಲ ಎಂಬ ಕೊರಗು ಇನ್ನೂ ಕಾಡುತ್ತಿದೆಯಂತೆ. ಆಶ್ಚರ್ಯ ಎಂದರೆ ಸುಮಲತಾ ಅಂಬರೀಶ್ ಕೂಡಾ ಯಶ್ ಮಗಳನ್ನು ಇನ್ನೂ ನೋಡಿಲ್ಲವಂತೆ, ಅದಕ್ಕೆ ಕಾರಣವೂ ಇದೆ.
ಅಂಬರೀಶ್ ಗಿಫ್ಟ್ ನೀಡಿದ್ದ ತೊಟ್ಟಿಲಲ್ಲಿ ಯಶ್ ಮಗಳನ್ನು ಇನ್ನೂ ಮಲಗಿಸಿಲ್ಲವಂತೆ. ತೊಟ್ಟಿಲಿನಲ್ಲಿ ಮಲಗಿಸುವ ಶಾಸ್ತ್ರ ಮಾಡುವಾಗ ಸುಮಲತಾ ಅವರೇ ಬಂದು ಮಗಳನ್ನು ತೊಟ್ಟಿಲಲ್ಲಿ ಮಲಗಿಸಬೇಕು ಎಂಬುದು ಯಶ್ ಆಸೆಯಂತೆ. ಅಲ್ಲದೆ ನೀವು ಎಂಪಿ ಆಗಿ ಗೆದ್ದು ಬಂದು ಈ ಶಾಸ್ತ್ರವನ್ನು ಮುಂದೆ ನಿಂತು ಮಾಡಬೇಕು ಎಂದು ಚುನಾವಣಾ ಸಮಯದಲ್ಲಿ ಯಶ್ ಹೇಳಿದ್ದರಂತೆ. ಆದ ಕಾರಣ ನಾನೂ ಕೂಡಾ ನನ್ನ ಮೊಮ್ಮಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಮಗುವಿಗೆ ಅವರು ಇಟ್ಟಿರುವ ಹೆಸರು ಬಹಳ ಚೆನ್ನಾಗಿದೆ ಎಂದು ಅಂಬರೀಶ್ ಅವರ 7ನೇ ತಿಂಗಳ ಪುಣ್ಯತಿಥಿ ವೇಳೆ ಸುಮಲತಾ ಹೇಳಿದ್ದಾರೆ.