ಯಶ್ ಹಾಗೂ ರಾಧಿಕಾ ಪಂಡಿತ್ ಮತ್ತೆ ಎರಡನೇ ಮಗುವಿಗೆ ತಂದೆ-ತಾಯಿಗಳಾಗುತ್ತಿದ್ದಾರೆ ಎಂಬ ವಿಷಯ ಹೇಳಿ ಅಭಿಮಾನಿಗಳಿಗೆ ನಿನ್ನೆ ಗುಡ್ ನ್ಯೂಸ್ ನೀಡಿದ್ದರು. ಇತ್ತೀಚೆಗೆ ಮಗಳಿಗೆ 'ಐರಾ' ಎಂದು ನಾಮಕರಣ ಕೂಡಾ ಮಾಡಿದ್ದರು.
ಮಗಳು ದೊಡ್ಡವಳಾದಾಗ ನಮಗೆ ಬೈದರೆ ಕಷ್ಟ... ರಾಧಿಕಾ ಹೀಗೇಕೆ ಹೇಳಿದ್ರು? - undefined
ಮಗಳಿಗೆ 'ಐರಾ' ಎಂಬ ಹೆಸರಿಡಲು ಕಾರಣ ಏನೆಂಬುದನ್ನು ರಾಧಿಕಾ ಪಂಡಿತ್ ಹೇಳಿದ್ದಾರೆ. ನಿನ್ನೆ 'ಆದಿಲಕ್ಷ್ಮಿ ಪುರಾಣ' ಆಡಿಯೋ ಬಿಡುಗಡೆ ಸಮಾರಂಭಕ್ಕೆ ರಾಧಿಕಾ ಆಗಮಿಸಿದ್ದರು. ಈ ವೇಳೆ ಅವರು ಮಗಳ ಹೆಸರಿನ ಹಿಂದಿನ ಅರ್ಥವನ್ನು ಹೇಳಿದ್ದಾರೆ.

ಇನ್ನು ರಾಧಿಕಾ ತಮ್ಮ ಮಗಳು 'ಐರಾ' ಹೆಸರಿನ ಅರ್ಥ ಏನೆಂಬುದನ್ನು ಹೇಳಿದ್ದಾರೆ. ರಾಧಿಕಾ ಅಭಿನಯದ 'ಆದಿಲಕ್ಷ್ಮಿ ಪುರಾಣ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಿನ್ನೆ ಜರುಗಿತು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ರಾಧಿಕಾ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಗಳು ಹುಟ್ಟಿದಾಗ ಎಲ್ಲರೂ ಲಕ್ಷ್ಮಿ ಹುಟ್ಟಿದಳು ಎಂದು ಹೇಳುತ್ತಿದ್ದರು. ಅವಳಿಗೆ ಹೆಸರನ್ನು ಸೆಲೆಕ್ಟ್ ಮಾಡಲು ಸಾಕಷ್ಟು ಸಮಯ ಹಿಡಿಯಿತು. ಅಭಿಮಾನಿಗಳು ಕೂಡಾ YR ಹೆಸರಿನಿಂದಲೇ ಸಾಕಷ್ಟು ಹೆಸರನ್ನು ಸಜೆಸ್ಟ್ ಮಾಡಿದ್ದರು. ಆದರೆ ನಮಗೆ ಏನಾದರೂ ಡಿಫರೆಂಟ್ ಹೆಸರು ಇಡಬೇಕು ಎನ್ನಿಸಿತ್ತು.
ಅಲ್ಲದೆ ನಾಳೆ ಮಗಳು ಬೆಳೆದು ದೊಡ್ಡವಳಾದಾಗ ಎಂತಹ ಹೆಸರಿಟ್ಟಿದ್ದೀರಾ ಎಂದು ನಮಗೆ ಬೈದರೆ ಏನು ಗತಿ...? ಆದ್ದರಿಂದ ಚಿಕ್ಕದಾಗಿ ಮುದ್ದಾಗಿರಲಿ ಎಂದು 'ಐರಾ' (Ayra) ಹೆಸರನ್ನು ಇಟ್ಟಿದ್ದೇವೆ. ಆ ಹೆಸರಿನಲ್ಲಿ ಯಶ್ ಮೊದಲ ಅಕ್ಷರ ನನ್ನ ಹೆಸರಿನ ಮೊದಲ ಅಕ್ಷರ ಇದೆ ಎಂದು ಮಗಳ ಹೆಸರಿನ ಹಿಂದಿನ ವಿಷಯವನ್ನು ಬಿಚ್ಚಿಟ್ಟರು ರಾಧಿಕಾ.