ಕರ್ನಾಟಕ

karnataka

ETV Bharat / sitara

ದೇಶದ ಮೇಲೆ ಪ್ರೀತಿ ಇರೋ ಪ್ರತಿಯೊಬ್ಬರೂ ನೆರೆ ಸಂತ್ರಸ್ತರಿಗೆ ಸಹಾಯ ಮಾಡೋಣ: ರವಿಚಂದ್ರನ್​​ - ಪ್ರಕೃತಿ ವಿಕೋಪ

ಉತ್ತರ ಕರ್ನಾಟಕ ಹಾಗೂ ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದಾಗಿ ಬಹಳಷ್ಟು ಜನರು ಸೂರು ಕಳೆದುಕೊಂಡಿದ್ದಾರೆ. ಆ ಜನರು ಮತ್ತೆ ಮೊದಲಿನಂತೆ ಜೀವನ ನಡೆಸುವವರೆಗೂ ನಾವು ಸಹಾಯಕ್ಕೆ ನಿಲ್ಲಬೇಕು ಎಂದು ನಟ ರವಿಚಂದ್ರನ್ ಹೇಳಿದ್ದಾರೆ.

ರವಿಚಂದ್ರನ್

By

Published : Aug 13, 2019, 11:02 PM IST

ರಾಜ್ಯದಲ್ಲಿ ಈಗ ಸೃಷ್ಟಿಯಾಗಿರೋ ವಾತಾವರಣದಲ್ಲಿ ಸಂಭ್ರಮ ಆಚರಿಸುವ ಮೂಡ್​ ಇಲ್ಲ. ಈಗೇನಿದ್ರೂ ಅಲ್ಲಿ ಇಲ್ಲಿ ಆಗಿರೋ ನೋವಿಗೆ ಸ್ಪಂದಿಸೋದಷ್ಟೇ ಎಲ್ಲಾ ಕಡೆ ಕಾಣಿಸ್ತಿದೆ ಎಂದು ನಟ ರವಿಚಂದ್ರನ್​ ಹೇಳಿದ್ದಾರೆ.

ರವಿಚಂದ್ರನ್​​

ಕೆಲವು ದಿನಗಳಿಂದ ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರವಾಹದಿಂದ ಸಾವಿರಾರು ಜನರು, ಮನೆ-ಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಹೀಗಾಗಿ ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ಮಾಡೋದು ಬೇಡ ಎನ್ನಿಸುತ್ತಿದೆ. ನಮ್ಮ ದೇಶದ ಮೇಲೆ ಯಾರು ಯಾರಿಗೆ ಗೌರವ ಇದೆ, ಪ್ರತಿಯೊಬ್ಬರೂ ಕೊಡಗು ಹಾಗೂ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸಹಾಯ ಮಾಡಬೇಕು. ಅಷ್ಟೇ ಅಲ್ಲ, ಆ ಜಿಲ್ಲೆಗಳ ಜನರು ಎಂದಿನಂತೆ ಜೀವನ ನಡೆಸೋವವರೆಗೆ, ಅಲ್ಲಿ ಸಹಜ ಪರಿಸ್ಥಿತಿ ಬರುವವರೆಗೆ ನಾವು ಸಹಾಯಕ್ಕೆ ನಿಲ್ಲಬೇಕು. ಆಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಅರ್ಥ ಬರಲಿದೆ ಎಂದು ರವಿಚಂದ್ರನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details