ಮಾದಕ ದ್ರವ್ಯ ದಂಧೆಯಲ್ಲಿ ಸ್ಯಾಂಡಲ್ವುಡ್ನ ಸುಮಾರು 15ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ನಿನ್ನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಆಧಾರದ ಮೇರೆಗೆ ಎಲ್ಲರಿಗೂ ನೋಟೀಸ್ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ನಿನ್ನೆ ಸತತ 5 ಗಂಟೆಗಳ ಕಾಲ ಇಂದ್ರಜಿತ್ ಲಂಕೇಶ್ ವಿಚಾರಣೆಯಲ್ಲಿ ಭಾಗಿಯಾಗಿದ್ದು ಮಾದಕ ದ್ರವ್ಯದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕ ಉಂಟಾಗಿದೆ. ವಿಚಾರಣೆಯಲ್ಲಿಇಂದ್ರಜಿತ್ ಲಂಕೇಶ್ ಅಶ್ಲೀಲ ವಿಡಿಯೋ ಹಾಗೂ ದಾಖಲೆಗಳ ಸಹಿತ ಹಲವಾರು ಪುಟಗಳ ಹೇಳಿಕೆಯನ್ನು ನೀಡಿದ್ದಾರೆ. ಹಾಗೆ 9 ನಟಿಯರು 6 ಮಂದಿ ನಟರ ಹೆಸರು ಹೇಳಿ ತನಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಸಮಯದಲ್ಲಿ ನನಗೆ ರಕ್ಷಣೆ ಬೇಕು. ಮಾಧ್ಯಮದಲ್ಲಿ ಹೇಳಿಕೆ ಕೊಟ್ಟ ನಂತರ ಬಹಳಷ್ಟು ಕರೆಗಳು ಬರುತ್ತಿವೆ. ಹೀಗಾಗಿ ಕೊಟ್ಟ ಮಾಹಿತಿ ಗೌಪ್ಯವಾಗಿಡಬೇಕು ಎಂದು ಇಂದ್ರಜಿತ್ ಲಂಕೇಶ್ ಮನವಿ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡಾ ಗೌಪ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.