ನಮ್ಮ ಸಾವು ಕೂಡ ಮೇಡ್ ಇನ್ ಚೀನಾ ಆಗೋಯ್ತು ಅಂತ ಕೊರೊನಾ ಬಗ್ಗೆ ವ್ಯಂಗ್ಯವಾಗಿ ನುಡಿದಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇದೀಗ ಮತ್ತೊಂದು ಪ್ರಶ್ನೆಯನ್ನು ಕೇಳಿದ್ದಾರೆ.
ಕೊರೊನಾ ವೈರೆಸ್ ವಿಶ್ವದಲ್ಲಿ ಇಷ್ಟೊಂದು ಹಾನಿ ಮಾಡಿ ಭೀತಿ ಸೃಷ್ಟಿಸುತ್ತಿರುವಾಗ ಎಲ್ಲಿಗೋದರೂ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ಗಳು. ಅವರು ಬೇರೆ ಗ್ರಹಕ್ಕೆ ಹೋದರು ಅಂತ ಹೇಳಬೇಡಿ ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಬಿಡುಗಡೆಯಾಗಿದ್ದು, ಹೃತಿಕ್ ರೋಷನ್ ಅಭಿನಯದ ಕ್ರಿಶ್-3 ಸಿನಿಮಾದಲ್ಲಿ ವೈರಸ್ ಒಂದು ಜನರಿಗೆ ಕಾಟ ಕೊಡುತ್ತಿದ್ದಾಗ ಹೃತಿಕ್ ತಂದೆ ಕಂಡು ಹಿಡಿದ ಔಷಧವನ್ನು ಜನರಿಗೆ ತಲುಪಿಸುವ ಕೆಲಸವನ್ನು ಹೃತಿಕ್ ಮಾಡ್ತಾರೆ. ಸಿನಿಮಾದಲ್ಲಿ ಇದ್ದಂತೆ ಕಷ್ಟ ಕಾಲದಲ್ಲಿ ಸಹಾಯ ಮಾಡಲು ಯಾವ ಸೂಪರ್ ಮ್ಯಾನ್ ಆಗಲೀ ಸ್ಪೈಡರ್ ಮ್ಯಾನ್ ಆಗಲೀ, ಬ್ಯಾಟ್ ಮ್ಯಾನ್ ಆಗಲಿ ಬರಲಿಲ್ಲ ಎಂಬ ಅರ್ಥದಲ್ಲಿ ರಾಮ್ ಗೋಪಾಲ್ ಹೇಳಿದ್ದಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ದಿನ ನಿತ್ಯದ ವಿದ್ಯಮಾನಗಳ ಬಗ್ಗೆ ಟೀಕೆ ಮಾಡುತ್ತ ವಿವಾದಗಳಿಂದ ಸುದ್ದಿಯಾಗುತ್ತಲೇ ಇರ್ತಾರೆ.