ನಿನ್ನೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೇಜಾನ್ ಕಂಪನಿಯ ಮುಖ್ಯಸ್ಥ ಜೆಫ್ ಬೆಜೋಸ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅಮೇಜಾನ್ ಸಿಇಒ ಹೇಳಿದ ಹಿಂದಿ ಡೈಲಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಈ ಕಾರ್ಯಮದಲ್ಲಿ ತಮ್ಮ ಜರ್ನಿ ಬಗ್ಗೆ ಜೆಫ್ ಬೆಜೋಸ್ ಮಾತನಾಡಿದ್ದಾರೆ. ಅಲ್ಲದೇ ಭಾರತದಲ್ಲಿ ಅಮೆಜಾನ್ ಸ್ಥಿತಿಗತಿ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ, ಜೋಯಾ ಅಖ್ತಾರ್, ರಿತೇಶ್ ಮತ್ತು ಪತ್ನಿ ಗೆನೆಲಿಯಾ, ವಿದ್ಯಾ ಬಾಲನ್ ಮತ್ತು ಸಿದ್ದಾರ್ಥ್ ರಾಯ್ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪತಿ, ಕಮಲ್ ಹಾಸನ್ ಭಾಗಿಯಾಗಿದ್ದರು.