ಹೈದರಾಬಾದ್ :ಖ್ಯಾತ ನಿರ್ದೇಶಕ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಚಿತ್ರ ಆರ್ಆರ್ಆರ್ ಮಾರ್ಚ್. 25ರಂದು ಬಿಡುಗಡೆಯಾಗಲಿದೆ. ಟಾಲಿವುಡ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಸಿನಿಮಾ ಬಿಡುಗಡೆಗೆಯ ಡೇಟ್ ಸಮೀಪಿಸುತ್ತಿದ್ದು, ಇದರ ನಡುವೆ ಜೂ.ಎನ್ಟಿಆರ್ ನಟನೆ ಬಗ್ಗೆ ರಾಜಮೌಳಿ ಈ ಹಿಂದೆ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗಿವೆ.
ಸದ್ಯ ಆರ್ಆರ್ಆರ್ ಸಿನಿಮಾ ತಯಾರಕರು ಕೆಲವು ಚಿತ್ರದ ಕುರಿತಂತೆ ಕೆಲವು ಸಂದರ್ಶನಗಳು ಬಿಡುಗಡೆ ಮಾಡಿದ್ದು, ಚಿತ್ರತಂಡ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ತುಣುಕುಗಳಿವೆ. ಅದರಲ್ಲಿ ಬಲ್ಗೇರಿಯಾದ ದಟ್ಟವಾದ ಕಾಡುಗಳಲ್ಲಿ ಸಿನಿಮಾ ಹೇಗೆ ಚಿತ್ರೀಕರಿಸಲಾಗಿದೆ ಎಂಬುದರ ಕುರಿತು ರಾಜಮೌಳಿ ಸಂಕ್ಷಿಪ್ತವಾಗಿ ಮಾತನಾಡುತ್ತಿದ್ದಾರೆ.
ನಾವು ಜೂ.ಎನ್ಟಿಆರ್ ಅವರನ್ನು ಬಲ್ಗೇರಿಯಾದ ದಟ್ಟವಾದ ಕಾಡುಗಳಲ್ಲಿ ಬರಿಗಾಲಿನಲ್ಲಿ ಓಡುವಂತೆ ಮಾಡಿದೆವು. ಅದು ಆರ್ಆರ್ಆರ್ನಲ್ಲಿ ತಾರಕ್ (ಜೂನಿಯರ್ ಎನ್ಟಿಆರ್) ಅವರ ಪರಿಚಯ ಮಾಡಿಕೊಡುವ ಶಾಟ್‌ಗಾಗಿ ಆಗಿತ್ತು. ಎನ್ಟಿಆರ್ ಹುಲಿಯಂತೆ ಓಡಿದನು. ಅದು ಅವನ ಉಗ್ರತೆಯನ್ನು ತೋರಿಸುತ್ತಿತ್ತು ಎಂದಿದ್ದಾರೆ.
ಇದರ ಜೊತೆಗೆ ರಾಮ್ ಚರಣ್ ನಟನಾ ಕೌಶಲ್ಯವನ್ನು ಒತ್ತಿ ಹೇಳಿರುವ ರಾಜಮೌಳಿ, ರಾಮ್ ಚರಣ್ ಜೊತೆಗಿನ ಒಂದು ಶಾಟ್ ಮುಗಿದ ನಂತರ ನನ್ನ ಕಣ್ಣಲ್ಲಿ ನೀರು ಬಂತು ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ ಜೀವನಾಧಾರಿತ ಸಿನಿಮಾವೇ 'ಆರ್ಆರ್ಆರ್'. ಚಿತ್ರದಲ್ಲಿ ರಾಮ್ಚರಣ್ ಹಾಗೂ ಜ್ಯೂ. ಎನ್ಟಿಆರ್ ಜೊತೆಗೆ ಬಾಲಿವುಡ್ ನಟರಾದ ಅಜಯ್ ದೇವಗನ್ ಆಲಿಯಾ ಭಟ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಇದನ್ನೂ ಓದಿ: ಯುವ ಜನತೆ ವಿಭಜನೆ ಆಗ್ತಾ ಇರೋದು ನೋವಿನ ಸಂಗತಿ: ನಟಿ ರಮ್ಯಾ