ಕರ್ನಾಟಕ

karnataka

ETV Bharat / sitara

​ ಪ್ರಶಾಂತ್ ನೀಲ್-ಜ್ಯೂ.ಎನ್​ಟಿಆರ್ ಸಿನಿಮಾ ಆರಂಭವಾಗುವುದು ಯಾವಾಗ...? - Mythri Movie Makers

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರೀಕರಣ ಭರದಿಂದ ಜರುಗುತ್ತಿದೆ. ಮತ್ತೊಂದೆಡೆ ಜ್ಯೂನಿಯರ್ ಎನ್​​ಟಿಆರ್, ಹೊಸ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಎರಡೂ ಸಿನಿಮಾಗಳು ಮುಗಿದ ನಂತರ ಜ್ಯೂನಿಯರ್ ಎನ್​​ಟಿಆರ್ ಹಾಗೂ ಪ್ರಶಾಂತ್ ನೀಲ್ ಜೊತೆಯಾಗಿ ಸಿನಿಮಾ ಆರಂಭಿಸಲಿದ್ದಾರೆ ಎಂದು ಮೈತ್ರಿ ಮೂವಿ ಮೇಕರ್ಸ್ ತಿಳಿಸಿದೆ.

Prashant neel
ಪ್ರಶಾಂತ್ ನೀಲ್

By

Published : Feb 13, 2021, 10:41 AM IST

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ತೆಲುಗು ನಟ ಜ್ಯೂನಿಯರ್ ಎನ್​ಟಿಆರ್​ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷದಿಂದ ಹರಿದಾಡುತ್ತಿದೆ. ಬಹುಶ: ಕೆಜಿಎಫ್ 2 ಮುಗಿದ ನಂತರ ಪ್ರಶಾಂತ್ ನೀಲ್ ಜ್ಯೂ ಎನ್​ಟಿಆರ್ ಜೊತೆ ಸಿನಿಮಾ ಆರಂಭಿಸಬಹುದು ಎನ್ನಲಾದರೂ ಪ್ರಶಾಂತ್ ನೀಲ್, ಪ್ರಭಾಸ್ ಅಭಿನಯದಲ್ಲಿ 'ಸಲಾರ್' ಚಿತ್ರವನ್ನು ಘೋಷಿಸಿದರು.

ಪ್ರಭಾಸ್ ಜೊತೆಗೆ ಪ್ರಶಾಂತ್ ನೀಲ್

ಇದನ್ನೂ ಓದಿ:ನಿರ್ದೇಶಕರಾಗಿ ಕಿರುತೆರೆಗೆ ಕಮ್​​ಬ್ಯಾಕ್ ಮಾಡಿದ ಮಾಸ್ಟರ್ ಆನಂದ್

ಸಲಾರ್ ಸಿನಿಮಾ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಹಾಗಿದ್ದಲ್ಲಿ ಜ್ಯೂನಿಯರ್ ಎನ್​​​ಟಿಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡ್ತಾರಾ ..? ಇಲ್ಲವಾ...? ಎಂದು ಯೋಚಿಸುತ್ತಿರುವ ಅಭಿಮಾನಿಗಳಿಗೆ ಮೈತ್ರಿ ಮೂವಿ ಮೇಕರ್ಸ್ ಸಂತೋಷದ ವಿಚಾರವನ್ನು ನೀಡಿದೆ. "ತಾರಕ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುವುದು ಖಚಿತವಾಗಿದ್ದು ಈಗಾಗಲೇ ಪ್ರಶಾಂತ್ ನೀಲ್​ಗೆ ಮೈತ್ರಿ ಮೂವಿ ಮೇಕರ್ಸ್ ಕಡೆಯಿಂದ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ. ಸಲಾರ್ ಮುಗಿಯುತ್ತಿದ್ದಂತೆ ಪ್ರಶಾಂತ್ ನೀಲ್ ಜ್ಯೂನಿಯರ್ ಎನ್​​ಟಿಆರ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈಗಷ್ಟೇ ತಾರಕ್ ಆರ್​ಆರ್​ಆರ್ ಸಿನಿಮಾ ಮುಗಿಸಿದ್ದು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಲಾರ್ ಮುಗಿಯುವ ವೇಳೆಗೆ ಈ ಸಿನಿಮಾ ಕೂಡಾ ಮುಗಿಯಲಿದೆ. ನಂತರ ಇಬ್ಬರೂ ಸೇರಿ ಸಿನಿಮಾ ಮಾಡಲಿದ್ದಾರೆ" ಎಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥಾಪಕರಾದ ನವೀನ್ ಹಾಗೂ ರವಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details