ಹೈದರಾಬಾದ್: ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡವಿನ ರೊಮ್ಯಾನ್ಸ್ ಸದ್ಯ ಗುಟ್ಟಾಗಿ ಉಳಿದಿಲ್ಲ. ಈವರೆಗೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ ಅಂತಾ ಟೈಗರ್ ಹೇಳುತ್ತಿದ್ದರೆ, ದಿಶಾ ಸ್ನೇಹವನ್ನೂ ಮೀರಿದ ಸಂಬಂಧ ನಮ್ಮದು ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಎಷ್ಟೇ ಪ್ರಯತ್ನ ಪಟ್ಟರೂ ಟೈಗರ್ ಇನ್ನೂ ಇಂಪ್ರೆಸ್ ಆಗಿಲ್ಲ ಅಂತಾ ಹೇಳಿರುವ ದಿಶಾ, ಇಬ್ಬರಲ್ಲಿ ಒಬ್ಬರಾದರೂ ಮೌನ ಮುರಿದು ಮಾತಾಡಬೇಕಿದೆ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ದಿಶಾ, ನಮ್ಮಿಬ್ಬರದ್ದು ಸ್ನೇಹ ಮೀರಿದ ಅನುಬಂಧ. ಶ್ರಾಫ್ನನ್ನು ಮೆಚ್ಚಿಸಲು ನಿರಂತರವಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಈಗಾಗಲೇ ಒಂದು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಜಿಮ್ನಾಸ್ಟಿಕ್ ಕಲಿತಿದ್ದೇನೆ. ಇದೆಲ್ಲವನ್ನೂ ಅವನಿಗೆ ಹೇಳಿದ್ರೂ, ಪ್ರಯೋಜನವಾಗಿಲ್ಲ. ನನ್ನಿಂದ ಇನ್ನೇನು ಮಾಡೋಕೆ ಸಾಧ್ಯ ಎಂದು ಬೇಸರದ ಮಾತನ್ನಾಡಿದ್ದಾರೆ.
ಈ ಹಿಂದೆಯೇ ಅವರು ಹಲವು ಸಾರಿ ಡೇಟಿಂಗ್ ಹೋಗಿದ್ದಾರೆ. ಒಟ್ಟಾಗಿ ಬರ್ತಡೇ ಸೆಲಬ್ರೇಶನ್ ಮಾಡಿದ್ದಾರೆ. ಆದರೂ, ಅವರ ನಡುವಿನ ಸಂಬಂಧಕ್ಕೆ ಪ್ರೀತಿ ಎಂಬ ಹಣೆಪಟ್ಟಿ ಕಟ್ಟಿಲ್ಲ ಎಂಬುದು ವಿಶೇಷ.