ಮುಂಬೈ:ಆಯುಷ್ಮಾನ್ ಖುರಾನ್ ಸದ್ಯ ಬಾಲಿವುಡ್‌ನ ಜನಪ್ರಿಯ ನಟ. ಆದರೆ, ಈತ ಮೊದ್ಲು ಒಳ್ಳೆ ಸಿಂಗರ್ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದವರು ಎಂದು ಯೂಫೋರಿಯಾ ಖ್ಯಾತಿಯ ಗಾಯಕ ಪಾಲಾಶ್ ಸೇನ್, ಆಯುಷ್ಮಾನ್ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆಯುಷ್ಮಾನ್ ಕುರಾನ್ ಸಿಂಗರ್ ಆಗಬೇಕು ಎಂದು ಒಮ್ಮೆ ಆಡಿಷನ್‌ಗೆ ಬಂದಿದ್ದ ಎಂದು ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ನಟ ಕಂ ಸಿಂಗರ್ ಆಯುಷ್ಮಾನ್ ಖುರಾನ್ ಬಗ್ಗೆ ಹಳೆಯ ಅನುಭವಗಳನ್ನು ಹಂಚಿಕೊಂಡಿರುವ ಪಾಲಾಶ್ ಸೇನ್, ಯಂಗ್‌ಸ್ಟರ್ ಖುರಾನ್ ರಿಯಾಲಿಟಿ ಷೋಗಳಲ್ಲಿ ಹಾಡುತ್ತಿದ್ದರು. 2003ರಲ್ಲಿ ಕಾರ್ಯಕ್ರಮವೊಂದರಲ್ಲಿ ಹಾಡಬೇಕು ಎಂದು ಯುವಕ ಆಯುಷ್ಮಾನ್ ಬಂದಿದ್ದ. ಆ ಕಾರ್ಯಕ್ರಮಕ್ಕೆ ನಾನು ಜಡ್ಜ್ ಆಗಿದ್ದೆ. ಅಲ್ಲಿ ಆತ ಗೆಲುವು ಸಾಧಿಸಲಿಲ್ಲ. ಆದರೆ, ನನ್ನ ಹೃದಯ ಗೆದ್ದಿದ್ದ. ಆತನಿಗೆ ನನ್ನ ಪ್ರೀತಿ ಎಂದೆಂದಿಗೂ ಇರುತ್ತದೆ ಎಂದಿದ್ದಾರೆ.