ಕರ್ನಾಟಕ

karnataka

ETV Bharat / sitara

‘ಆ ಕೋಣೆಯಲ್ಲಿ ಒಬ್ಬಂಟಿಯಾಗಿದ್ದೆ..’ ಪಾತ್ರಕ್ಕಾಗಿ ‘ರಾಜಿ’ಯಾಗಲು ಹೇಳಿದ ನಿರ್ಮಾಪಕನ ಬಗ್ಗೆ ಬಿಚ್ಚಿಟ್ಟ ನಟಿ - ನಟಿಯಾಗಿ ಅನುಭವಿಸಿದ ಕೆಟ್ಟ ದಿನಗಳ ನೆನೆದ ಅಂಕಿತಾ ಲೋಖಂಡೆ

ಪಾತ್ರದ ಆಸೆ ತೋರಿಸಿ ಮಂಚಕ್ಕೆ ಕರೆದ ನಿರ್ಮಾಪಕನಿಗೆ ಕಲಿಸಿದ ಪಾಠದ ಬಗ್ಗೆ ಬಾಲಿವುಡ್​ ನಟಿ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿ ರಾಜಿಯಾಗಬೇಕು. ಆದರೆ ಕೆಟ್ಟ ಕ್ಷಣಗಳಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಅಂಕಿತಾ ಹೇಳಿದ್ದಾರೆ.

ನಟಿ ಅಂಕಿತಾ ಲೋಖಂಡೆ
ನಟಿ ಅಂಕಿತಾ ಲೋಖಂಡೆ

By

Published : Mar 24, 2021, 4:22 PM IST

ಬಾಲಿವುಡ್​ ನಟಿ ಅಂಕಿತಾ ಲೋಖಂಡೆ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ಮೆಲುಕು ಹಾಕಿದ್ದಾರೆ. ನಟಿಯಾಗಿ ತಾವು ಅನುಭವಿಸಿದ ಕೆಟ್ಟ ದಿನಗಳನ್ನು ನೆನೆಸಿಕೊಂಡಿದ್ದಾರೆ.

ಪಾತ್ರದ ಆಸೆ ತೋರಿಸಿ ರಾಜಿಯಾಗಲು ಹೇಳಿದ ನಿರ್ಮಾಪಕನಿಗೆ ಕಲಿಸಿದ ಪಾಠದ ಬಗ್ಗೆ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿ ರಾಜಿಯಾಗಬೇಕು. ಆದರೆ ಕೆಟ್ಟ ಕ್ಷಣಗಳಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದು ಅಂಕಿತಾ ಹೇಳಿದ್ದಾರೆ.

ಪಾತ್ರದ ಆಸೆ ತೋರಿಸಿ ರಾಜಿಯಾಗಲು ಹೇಳಿದ ನಿರ್ಮಾಪಕನ ಬಗ್ಗೆ ಅಂಕಿತಾ ಹೇಳುತ್ತಾರೆ: "ನಾನು ತುಂಬಾ ಸ್ಮಾರ್ಟ್ ಆಗಿದ್ದೆ. ನಾನು ಆ ಕೋಣೆಯಲ್ಲಿ ಒಬ್ಬಂಟಿಯಾಗಿದ್ದೆ. ಆಗ ನನಗೆ 19 ಅಥವಾ 20 ವರ್ಷ ವಯಸ್ಸು. ನಿಮ್ಮ ನಿರ್ಮಾಪಕ ಯಾವ ರೀತಿಯ ರಾಜಿ ಬಯಸುತ್ತಾರೆ? ನಾನು ಪಾರ್ಟಿಗಳು ಅಥವಾ ಔತಣಕೂಟಗಳಿಗೆ ಹೋಗಬೇಕೇ?" ಎಂದು ನಾನು ಆತನ ಸಹಚರನನ್ನು ಕೇಳಿದ್ದೆ.

"ಆತ ಹೇಳಿದ ‘ಆ’ ರಾಜಿ ಬಗ್ಗೆ ಕೇಳಿದ ನಾನು ಆತನಿಗೆ ತಕ್ಕ ಪಾಠ ಕಲಿಸಿದೆ. ನಾನು ಅವನಿಗೆ, ನಿಮ್ಮ ನಿರ್ಮಾಪಕನು ಹುಡುಗಿಯನ್ನು ಮಂಚಕ್ಕೆ ಕರೆಯ ಬಯಸುತ್ತಾನೆ. ಆದರೆ ತುಂಬಾ ಪ್ರತಿಭಾವಂತ ಹುಡುಗಿಯೊಂದಿಗೆ ಕೆಲಸ ಮಾಡಬಾರದಂತ ಅವನಿಗೆ ಹೇಳಿ ನಾನು ಅಲ್ಲಿಂದ ಹೊರಟೆ. ನಂತರ ಅವರು ಕ್ಷಮೆಯಾಚಿಸಿದರು. ಬಳಿಕ ನನ್ನನ್ನು ತಮ್ಮ ಚಿತ್ರದಲ್ಲಿ ಅಭಿನಯಿಸಲು ಕೇಳಿದರು. ಆದರೆ ನಿಮ್ಮ ಚಿತ್ರದಲ್ಲಿ ನಟಿಸಲು ನನಗೆ ಆಸಕ್ತಿಯಿಲ್ಲವೆಂದು ಹೇಳಿದೆ."

ಆ ಬಳಿಕ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕ ನಂತರವೂ ಶೋಷಣೆ ತಂತ್ರಗಳನ್ನು ಎದುರಿಸಿದ್ದೇನೆ ಎಂದು ಅಂಕಿತಾ ಬಿಚ್ಚಿಟ್ಟರು. "ನಾನು ಮತ್ತೆ ಚಿತ್ರಗಳಿಗೆ ಬಂದಾಗ, ನಾನು ಅದನ್ನು ಮತ್ತೆ ಅನುಭವಿಸಿದೆ. ಅವರು ಯಾರೆಂದು ಹೆಸರುಗಳನ್ನು ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ಅವನು ದೊಡ್ಡ ನಟ. ಅವರನ್ನು ಭೇಟಿಯಾದಾಗ, ಕೈಕುಲುಕಿದಾಗ ನನಗೆ ಆ ಕಂಪನಗಳ ಅನುಭವವಾಯಿತು. ನಾನು ಬೇಗನೆ ನನ್ನ ಕೈಗಳನ್ನು ಅವನಿಂದ ಬಿಡಿಸಿಕೊಂಡೆ. ನನಗೆ ಅದು ತಿಳಿದಿತ್ತು. ಇಲ್ಲಿ ಕೆಲಸ ಮಾಡುವುದು ನನ್ನಿಂದ ಆಗಲ್ಲ ಎಂದು ನನಗೆ ಅರ್ಥವಾಯಿತು. ಏಕೆಂದರೆ ಅದು ಕೊಡುವ ಮತ್ತು ತೆಗೆದುಕೊಳ್ಳುವ ವಿಷಯ. ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಅದು ನನ್ನದಲ್ಲದ ಕಾರಣ ನಾನು ಅಲ್ಲಿಂದ ಹೊರಟೆ" ಎಂದು ಲೋಖಂಡೆ ನೆನಪಿಸಿಕೊಂಡರು.

ಅಂಕಿತಾ ಲೋಖಂಡೆ ಮಾತ್ರವಲ್ಲ, ಈ ಹಿಂದೆ ಬಾಲಿವುಡ್​ನ ಆಯುಷ್ಮಾನ್ ಖುರಾನಾ, ಕಂಗನಾ ರಣಾವತ್​, ಸ್ವರಾ ಭಾಸ್ಕರ್, ಕಲ್ಕಿ ಕೋಚ್ಲಿನ್, ಸುರ್ವೀನ್ ಚಾವ್ಲಾ, ಚಿತ್ರಂಗಡ ಸಿಂಗ್ ಮತ್ತು ಹಲವಾರು ಸೆಲೆಬ್ರಿಟಿಗಳು ತಮ್ಮ ಕೆಟ್ಟ ಕಾಸ್ಟಿಂಗ್ ಕೌಚ್ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ABOUT THE AUTHOR

...view details