ಹೈದರಾಬಾದ್:ಬಾಲಿವುಡ್ನ ಮಿ. ಪರ್ಫೆಕ್ಷನಿಸ್ಟ್ ನಟ ಅಮೀರ್ ಖಾನ್ 15 ವರ್ಷಗಳ ನಂತರ ಪತ್ನಿ ಕಿರಣ್ ರಾವ್ಗೆ ವಿಚ್ಛೇದನ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಜಂಟಿಯಾಗಿ ಹೇಳಿಕೆ ನೀಡಿದ್ದು, ಇನ್ಮುಂದೆ ನಮ್ಮ ಹೊಸ ಅಧ್ಯಾಯ ಆರಂಭ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಡಿಸೆಂಬರ್ 2005ರಲ್ಲಿ ಕಿರಣ್ ರಾವ್ ಜೊತೆ ವಿವಾಹ ಮಾಡಿಕೊಂಡಿದ್ದ ಅಮೀರ್ ಖಾನ್ ಇದೀಗ ವಿಚ್ಛೇದನ ಪಡೆದುಕೊಂಡಿದ್ದು, ಪುತ್ರನ ಪೋಷಕರಾಗಿ ಮುಂದುವರೆಯಲಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಹಿಂದಿನ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅಮೀರ್ ಖಾನ್ ಕಿರಣ್ ರಾವ್ ಇಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ನಿದರ್ಶನಗಳಿವೆ.
56 ವರ್ಷದ ಬಾಲಿವುಡ್ ನಟ ಅಮೀರ್ ಖಾನ್, ಹಾಗೂ 47 ವರ್ಷದ ಕಿರಣ್ ರಾವ್ 2001ರ ಬ್ಲಾಕ್ಬಸ್ಟರ್ ಚಿತ್ರ 'ಲಗಾನ್' ವೇಳೆ ಭೇಟಿಯಾಗಿದ್ದರು. ಇದಾದ ಬಳಿಕ ಡಿಸೆಂಬರ್ 2005ರಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. 2011ರಲ್ಲಿ ಮಗ ಆಜಾದ್ನ ಜನ್ಮವಾಗುತ್ತದೆ.ಸುಮಾರು 15 ವರ್ಷಗಳ ಕಾಲ ಸಂತೋಷವಾಗಿ ಜೀವನ ನಡೆಸಿರುವ ಅವರು ಇದೀಗ ಪ್ರತ್ಯೇಕವಾಗಿ ಜೀವನ ನಡೆಸಲು ಮುಂದಾಗಿದ್ದಾರೆ.