ಕರ್ನಾಟಕ

karnataka

ETV Bharat / sitara

ಕಿಚ್ಚನ 'ಫ್ಯಾಂಟಮ್' ಸಿನಿಮಾ ಬಗ್ಗೆ ತೆಲುಗು ಸ್ಟಾರ್ ನಾಗಾರ್ಜುನ ಹೇಳಿದ್ದೇನು..? - Akkineni Nagarjuna wished to Phantom team

ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ 'ಫ್ಯಾಂಟಮ್​' ಚಿತ್ರದ ಬಗ್ಗೆ ತೆಲುಗು ನಟ ನಾಗಾರ್ಜುನ ಅವರಿಗೆ ಕೂಡಾ ಕುತೂಹಲ ಇದೆಯಂತೆ. ಕಳೆದ ವಾರ ತೆಲುಗು ಬಿಗ್​ಬಾಸ್​​​ ವೇದಿಕೆಗೆ ಸುದೀಪ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಗಾರ್ಜುನ ' ಈ ಚಿತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುತ್ತೀರ' ಎಂದು ಹೇಳಿದ್ದಾರೆ.

Nagarjuna reaction about Phantom
'ಫ್ಯಾಂಟಮ್'

By

Published : Nov 30, 2020, 1:13 PM IST

ಕಿಚ್ಚ ಸುದೀಪ್ ಕಳೆದ ವಾರವಷ್ಟೇ 'ಫ್ಯಾಂಟಮ್' ಚಿತ್ರದ ಹೈದರಾಬಾದ್​​​ ಭಾಗದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದರು. ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ಫ್ಯಾಂಟಮ್' ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಟೈಟಲ್​​​​​​ನಿಂದಲೇ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಸುದ್ದಿ ಆಗುತ್ತಿರುವ ಫ್ಯಾಂಟಮ್ ಚಿತ್ರದ, ಬಗ್ಗೆ ತೆಲುಗಿನ ಸೂಪರ್ ಸ್ಟಾರ್ ನಾಗಾರ್ಜುನ ಅವರಿಗೂ ಕುತೂಹಲ ಇದೆಯಂತೆ.

'ಫ್ಯಾಂಟಮ್' ಸಿನಿಮಾ ಬಗ್ಗೆ ನಾಗಾರ್ಜುನ ಪ್ರತಿಕ್ರಿಯೆ

ಎರಡು ದಿನಗಳ ಹಿಂದೆ ತೆಲುಗು ಬಿಗ್ ಬಾಸ್ ಸೀಸನ್ 4 ಆವೃತ್ತಿಯ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅತಿಥಿ ಆಗಿ ಹೋಗಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಅಕ್ಕಿನೇನಿ ನಾಗಾರ್ಜುನ ತೆಲುಗು ಬಿಗ್​ ಬಾಸ್​ ನಿರೂಪಣೆ ಮಾಡುತ್ತಿದ್ದಾರೆ. ಈ ಶೋ ನಡುವೆ ನಾಗಾರ್ಜುನ, 'ಫ್ಯಾಂಟಮ್' ಸಿನಿಮಾ ಬಗ್ಗೆ ಮಾತನಾಡಿದ್ದಾರೆ.ಈ ಸಿನಿಮಾ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ನಾಗಾರ್ಜುನ ಬಳಿ ಹೇಳಿದ್ರಂತೆ. ''ಈ ಚಿತ್ರವನ್ನು ವಿಶ್ವಮಟ್ಟಕ್ಕೆ ಕೊಂಡ್ಯೊಯ್ಯುತ್ತೀರ'' ಎಂದು ನಾಗಾರ್ಜುನ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, '' ಒಳ್ಳೆ ಕಥೆ, ಒಳ್ಳೆ ಸ್ಕ್ರೀನ್ ಪ್ಲೇ ಇದ್ರೆ, ಇಡೀ ಪ್ರಪಂಚವೇ ಸಿನಿಮಾವನ್ನು ಒಪ್ಪಿಕೊಳ್ಳುತ್ತದೆ'' ಎಂದು ಹೇಳಿದ್ದಾರೆ. ನಾಗಾರ್ಜುನ ಅವರ ಈ ಮಾತು ಅನೂಪ್ ಭಂಡಾರಿ ಅವರಿಗೆ ಖುಷಿ ನೀಡಿದೆ.

ಸುದೀಪ್, ವಿಕ್ರಾಂತ್ ರೋಣ ಪಾತ್ರಕ್ಕೆ ಬಾಡಿ ಬಿಲ್ಡ್ ಮಾಡಿ ಲುಕ್ ಬದಲಿಸಿಕೊಂಡಿದ್ದಾರೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಬಂಡವಾಳ ಹೂಡಿದ್ದ ಜಾಕ್ ಮಂಜು ಈ, 'ಫ್ಯಾಂಟಮ್' ಚಿತ್ರವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಆಗಿ ಕಿಚ್ಚ ಯಾವ ರೀತಿ ಅಬ್ಬರಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ABOUT THE AUTHOR

...view details