ಚೆನ್ನೈ:ನಿನ್ನೆಯಷ್ಟೇ ಸಾಹಿತಿ ಕೆ. ಕಲ್ಯಾಣ್ ಎಸ್ಪಿಬಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಅವರ ಆರೋಗ್ಯ ಸ್ಥಿರವಾಗಿದ್ದು ಕೊರೊನಾ ವರದಿ ನೆಗೆಟಿವ್ ಬಂದಿದೆ, ಅಲ್ಲದೆ ಸ್ವತ: ಉಸಿರಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇದೀಗ ಎಸ್ಪಿಬಿ ಪುತ್ರ ಫೇಸ್ಬುಕ್ ಲೈವ್ನಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ವದಂತಿಗಳನ್ನು ನಂಬಬೇಡಿ...ಎಸ್ಪಿಬಿ ಕೋವಿಡ್-19 ವರದಿ ಬಗ್ಗೆ ಪುತ್ರ ಹೇಳಿದ್ದೇನು..? - Charan update about spb health
ನಮ್ಮ ತಂದೆ ಕೋವಿಡ್-19 ವರದಿ ಇನ್ನೂ ಬಂದಿಲ್ಲ, ಅವರ ಆರೋಗ್ಯ ಸ್ಥಿರವಾಗಿದೆ. ಇಂದಿಗೂ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರೆಸಲಾಗಿದೆ. ವರದಿ ನೆಗೆಟಿವ್ ಬರುವುದಾಗಿ ನಮಗೂ ವಿಶ್ವಾಸವಿದೆ ಎಂದು ಎಸ್.ಬಿ. ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ. ಚರಣ್ ಮಾಹಿತಿ ನೀಡಿದ್ದಾರೆ.
ನಾನು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಿನ್ನೆಯಿಂದ ನಮ್ಮ ತಂದೆ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ವರದಿ ಇನ್ನೂ ಬಂದಿಲ್ಲ. ತಂದೆಯ ರಿಪೋರ್ಟ್ ನೆಗೆಟಿವ್ ಬರುವುದಾಗಿ ನಾವೂ ಕೂಡಾ ನಂಬಿದ್ದೇವೆ. ಅಷ್ಟೇ ಅಲ್ಲ ವೆಂಟಿಲೇಟರ್ ಮೂಲಕವೇ ಇನ್ನೂ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಶೀಘ್ರವೇ ಅವರು ಗುಣಮುಖರಾಗಲಿದ್ದಾರೆ. ತಂದೆ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಇಂದು ಸಂಜೆ ವೈದ್ಯರೊಂದಿಗೆ ಮಾತನಾಡಿ ತಂದೆ ಆರೋಗ್ಯದ ಬಗ್ಗೆ ಮತ್ತಷ್ಟು ಅಪ್ಡೇಟ್ ನೀಡುತ್ತೇನೆ ಎಂದು ಎಸ್.ಪಿ ಚರಣ್ ಹೇಳಿದ್ದಾರೆ.