ಕಳೆದ ಒಂದು ವಾರದಿಂದಲೇ ನಾಡಿನಾದ್ಯಂತ ದೀಪಾವಳಿ ಸಂಭ್ರಮ ಆರಂಭವಾಗಿದೆ. ರಾಜ್ಯದಲ್ಲಿ ಈ ಬಾರಿ ಪಟಾಕಿ ನಿಷೇಧವಿದ್ದರೂ ಕೆಲವರು ಪಟಾಕಿ ಸಿಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ್ದಾರೆ.
ದೀಪಾವಳಿ ಶುಭ ಕೋರಿ ಅಭಿಮಾನಿಗಳಲ್ಲಿ ಪುನೀತ್ ಮಾಡಿದ ಮನವಿ ಏನು..? - Sandalwood actor Puneet rajkumar
ರಾಜ್ಯದ ಜನತೆಗೆ ಹಾಡಿನ ಮೂಲಕ ದೀಪಾವಳಿ ಶುಭ ಕೋರಿರುವ ಪುನೀತ್ ರಾಜ್ಕುಮಾರ್, ಪಟಾಕಿ ಸುಡುವ ಬದಲು ಕ್ಯಾಲರೀಸ್ ಸುಟ್ಟುಹಾಕಿ ಎಂದು ಸಂದೇಶ ನೀಡಿದ್ದಾರೆ.
ಅಭಿಮಾನಿಗಳಲ್ಲಿ ಪುನೀತ್ ಮನವಿ
ಪುನೀತ್ ರಾಜ್ಕುಮಾರ್ ದೀಪಾವಳಿ ಹಾಡೊಂದನ್ನು ಹಾಡುವ ಮೂಲಕ ಮೊದಲಿಗೆ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಬೆಳಕಿನ ಹಬ್ಬದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ ಒಂದು ಮನವಿ ಕೂಡಾ ಮಾಡಿದ್ದಾರೆ. '' ಪಟಾಕಿ ಸುಡುವ ಬದಲು, ನಮ್ಮಲ್ಲಿ ಇರುವ ಕ್ಯಾಲರೀಸ್ ಸುಡುವುದು ಒಳ್ಳೆಯದು'' ಎಂದು ಸ್ಯಾಂಡಲ್ ವುಡ್ ದೊಡ್ಮನೆ ಹುಡುಗ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ''ಅಕ್ಕಪಕ್ಕದಲ್ಲಿದ್ದವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ'' ಎಂದು ಪುನೀತ್, ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.