ಮಾರ್ಚ್ 11 ರಂದು ರಾಬರ್ಟ್ ಚಿತ್ರವನ್ನು ಆಂಧ್ರ , ತೆಲಂಗಾಣದಲ್ಲಿ ಬಿಡುಗಡೆ ಮಾಡಲು ವಿರೋಧ ಒಡ್ಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದು ದರ್ಶನ್ ಇಂದು ಫಿಲ್ಮ್ ಚೇಂಬರ್ಗೆ ತೆರಳಿ ಈ ವಿಚಾರವಾಗಿ ಮಾತುಕಥೆ ನಡೆಸಲಿದ್ದಾರೆ ಎನ್ನಲಾಗಿದೆ.
ತೆಲುಗಿನಲ್ಲಿ ರಾಬರ್ಟ್ ಬಿಡುಗಡೆಗೆ ಅಡ್ಡಿ...ಎನ್.ಎಂ. ಸುರೇಶ್ ಹೇಳಿದ್ದೇನು..?
'ರಾಬರ್ಟ್' ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ದರ್ಶನ್ ಫಿಲ್ಮ್ ಚೇಂಬರ್ಗೆ ಬರಲಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಬಂದ ನಂತರ ಇದರ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ತೆಲುಗು ಚಿತ್ರರಂಗದ ವಿರುದ್ಧ ಗರಂ ಆದ ದರ್ಶನ್...ಕಾರಣ ಏನು...?
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್.ಎಂ. ಸುರೇಶ್ 'ರಾಬರ್ಟ್' ಸಿನಿಮಾವನ್ನು ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡಲು ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದಿದೆ. ಈ ಬಗ್ಗೆ ಕೂಲಂಕುಶವಾಗಿ ಮಾತನಾಡಲು ದರ್ಶನ್ ಹಾಗೂ ಚಿತ್ರತಂಡ ಶೀಘ್ರದಲ್ಲೇ ಫಿಲ್ಮ್ ಚೇಂಬರ್ಗೆ ಬರುತ್ತಿದ್ದಾರೆ. ಸಮಸ್ಯೆ ಏನು ಎನ್ನುವುದರ ಬಗ್ಗೆ ದರ್ಶನ್ ಹೇಳುತ್ತಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಜೈರಾಜ್ ಬಂದ ನಂತರ ಈ ವಿಚಾರವಾಗಿ ಚರ್ಚಿಸಿ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ ಎಂದು ಎನ್.ಎಂ. ಸುರೇಶ್ ಹೇಳಿದ್ದಾರೆ.