ಕರ್ನಾಟಕ

karnataka

ETV Bharat / sitara

'ಹೀರೋ' ಚಿತ್ರೀಕರಣದ ವಿಡಿಯೋ ಈಗ ರಿವೀಲ್ ಆಗಿರುವ ಹಿಂದಿನ ಉದ್ದೇಶವೇನು...? - Hero making video viral

'ಹೀರೋ' ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿ ತಗುಲಿ ಗಾನವಿ ಲಕ್ಷ್ಮಣ್ ಹಾಗೂ ರಿಷಭ್​ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ ಎಂದು ಬಿಂಬಿಸಲಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಆದರೆ ಇದು ಚಿತ್ರದ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಷ್ಟೇ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.

Hero movie Making video
ವೈರಲ್ ಆದ 'ಹೀರೋ' ಮೇಕಿಂಗ್ ವಿಡಿಯೋ

By

Published : Mar 1, 2021, 7:03 PM IST

Updated : Mar 1, 2021, 7:30 PM IST

ಯಾವುದೇ ಸಿನಿಮಾ ಬಿಡುಗಡೆ ಮಾಡುವ ಮುನ್ನ ಚಿತ್ರತಂಡ ಪ್ರಮೋಷನ್ ಮಾಡುವುದು ಸಾಮಾನ್ಯ. ಅದೇ ರೀತಿ ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಉದ್ದೇಶದಿಂದ ಚಿತ್ರತಂಡ ನಾನಾ ರೀತಿಯ ಗಿಮಿಕ್ ಮಾಡುವುದು ಕೂಡಾ ಅಷ್ಟೇ ಸಾಮಾನ್ಯವಾಗಿದೆ. ಇದೀಗ ಇಂಥದ್ದೊಂದು ಅನುಮಾನ ರಿಷಭ್ ಶೆಟ್ಟಿ ಅಭಿನಯದ 'ಹೀರೋ' ಸಿನಿಮಾ ತಂಡದ ಮೇಲೆ ಉಂಟಾಗಿದೆ.

ವೈರಲ್ ಆದ 'ಹೀರೋ' ಮೇಕಿಂಗ್ ವಿಡಿಯೋ

'ಹೀರೋ' ಸಿನಿಮಾ ಮಾರ್ಚ್ 5 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ರಿಲೀಸ್ ಆಗಲು 4 ದಿನಗಳಷ್ಟೇ ಬಾಕಿ ಇದೆ. ಆದರೆ ನಿನ್ನೆಯಿಂದ ಈ ಸಿನಿಮಾ ಚಿತ್ರೀಕರಣದ ವೇಳೆ ರೆಕಾರ್ಡ್ ಮಾಡಲಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಹಾಸನ ಬಳಿಯ ಕಾಫಿ ಎಸ್ಟೇಟ್​​ವೊಂದರ ಬಳಿ ಬಾಂಬ್ ಸ್ಫೋಟಗೊಳ್ಳುವ ದೃಶ್ಯವೊಂದನ್ನು ಚಿತ್ರೀಕರಣ ಮಾಡುವಾಗ ಆಕಸ್ಮಿಕವಾಗಿ ರಿಷಭ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್​​​​​​​​​​​​​​​​​​​​​​​​​ಗೆ ಬೆಂಕಿ ತಗುಲಿದೆ. ಚಿತ್ರತಂಡ ಕೂಡಲೇ ಹೋಗಿ ನೀರು ಹಾಕಿ ಬೆಂಕಿ ನಂದಿಸಿದೆ. ಅದೃಷ್ಟವಷಾತ್ ಗಾನವಿ ಹಾಗೂ ರಿಷಭ್ ಪ್ರಾಣಾಪಾಯದಿಂದ ಪಾರಾಗಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ. ಆದರೆ ಈ ವಿಡಿಯೋ ರಿವೀಲ್ ಆಗಿರುವುದರ ಹಿಂದೆ ಬಹಳ ಪ್ರಶ್ನೆಗಳು ಉದ್ಭವವಾಗಿವೆ.

ಇದನ್ನೂ ಓದಿ:ಮನುಷ್ಯರಿಗಿಂತ ಪ್ರಾಣಿಗಳ ಜೊತೆ ಹೆಚ್ಚು ಹಾಯಾಗಿರುತ್ತೇನೆ: ನಟಿ ಅದಾ ಶರ್ಮಾ

'ಹೀರೋ' ಸಿನಿಮಾ ರಿಲೀಸ್ ಆಗಲು 4 ದಿನಗಳಷ್ಟೇ ಬಾಕಿ ಇದೆ. ಇಷ್ಟಕ್ಕೂ ಈ ಅವಘಡ ಸಂಭವಿಸಿದ್ದು ಯಾವಾಗ..? ಸೆನ್ಸಾರ್ ಮುಗಿಸಿ ರಿಲೀಸ್​​​ಗೆ ರೆಡಿಯಾಗಿರುವ ಸಿನಿಮಾಗೆ ಮತ್ತೆ ಹೇಗೆ ಚಿತ್ರೀಕರಣ ಮಾಡಲು ಸಾಧ್ಯ..? ಹಾಗೊಂದು ವೇಳೆ ಚಿತ್ರೀಕರಣ ಮಾಡಬೇಕು ಎಂದಾದಲ್ಲಿ ಆ ಸಿನಿಮಾ ಮತ್ತೆ ಸೆನ್ಸಾರ್​ಗೆ ಹೋಗಲೇಬೇಕು. ಅದು ನಾಲ್ಕು ದಿನಗಳಲ್ಲಿ ಸಾಧ್ಯವೇ ಇಲ್ಲ. ಆದ್ದರಿಂದ ಚಿತ್ರ ರಿಲೀಸ್ ಆಗುವ ಸಮಯದಲ್ಲಿ ಗಾನವಿ ಹಾಗೂ ರಿಷಭ್ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಈ ಸುದ್ದಿ ಕೇವಲ ಸಿನಿಮಾ ಪ್ರಚಾರದ ಗಿಮಿಕ್ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ, ರಿಷಭ್ ಶೆಟ್ಟಿ ಹೀಗೆಲ್ಲಾ ಮಾಡುವವರಲ್ಲ ಎಂದು ಕೂಡಾ ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ಆದರೆ ಈ ವಿಡಿಯೋ ಈಗ ಏಕೆ ರಿವೀಲ್ ಆಯ್ತು ಎಂಬ ಪ್ರಶ್ನೆಗೆ ಮಾತ್ರ ಯಾರಿಂದಲೂ ಉತ್ತರ ದೊರೆಯುತ್ತಿಲ್ಲ.

Last Updated : Mar 1, 2021, 7:30 PM IST

ABOUT THE AUTHOR

...view details