ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​​​ನಲ್ಲಿ ವಿಚಿತ್ರ ಹೆಸರಿನ ಸಿನಿಮಾಗಳ ದರ್ಬಾರ್​...ಈ ಬಗ್ಗೆ ಏನು ಹೇಳುತ್ತೆ ಫಿಲ್ಮ್​​ ಚೇಂಬರ್​​...?

ಅದೊಂದು ಕಾಲವಿತ್ತು. ಸಿನಿಮಾ ಟೈಟಲ್ ಅಂದ್ರೆ ಅಣ್ಣಾವ್ರ ಬಂಗಾರದ ಮನುಷ್ಯ, ತಂದೆಗೆ ತಕ್ಕ ಮಗ, ದೇವತಾ ಮನುಷ್ಯ, ವಿಷ್ಣುವರ್ಧನ್ ಅವರ ಸೊಸೆ ತಂದ ಸೌಭಾಗ್ಯ, ಗಲಾಟೆ ಸಂಸಾರ, ಸೂರ್ಯವಂಶ ಹೀಗೆ ಹೇಳ್ತಾ ಹೋದ್ರೆ ನೂರಾರು ಟೈಟಲ್​​​​​​​​​​​​​​​​​​​​​​​​​​​​​ಗಳು ನೆನಪಿಗೆ ಬರುತ್ತದೆ.

ವಿಚಿತ್ರ ಹೆಸರಿನ ಸಿನಿಮಾಗಳ ದರ್ಬಾರ್

By

Published : Aug 2, 2019, 3:29 PM IST

ಇತ್ತೀಚೆಗೆ ತಯಾರಾಗುತ್ತಿರುವ ಸಿನಿಮಾ ಟೈಟಲ್​​​​​ಗಳು ಇದೊಂದು ಸಿನಿಮಾ ಹೆಸರಾ ಎಂದು ಯೋಚಿಸುವ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ಮಾತನಾಡುವ ಪದಗಳೇ ಸಿನಿಮಾ ಟೈಟಲ್ ಆಗಿಹೋಗಿದೆ. ದಿನನಿತ್ಯದ ಬೈಗುಳಗಳೇ ಚಿತ್ರಗಳ ಶೀರ್ಷಿಕೆ ಆಗಿದೆ. ಅದರಲ್ಲೂ ಈಗಿನ ಸಿನಿಮಾ ನಿರ್ದೇಶಕ, ನಿರ್ಮಾಪಕರು ಟೈಟಲ್​​​ನಿಂದಲೇ ಹೆಚ್ಚು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಡಿಚ್ಕಿ ಡಿಸೈನ್, ಫುಲ್ ಟೈಟ್ ಪ್ಯಾತೆ, ಎಂಆರ್​​​​ಪಿ ಜರ್ಕ್, ಹಫ್ತಾ, ಸೈನೆಡ್ ಮಲ್ಲಿಕಾ, ಟ್ರಂಕ್, ಸವರ್ಣದೀರ್ಘ ಸಂಧಿ, ದಯವಿಟ್ಟು ಗಮನಿಸಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಬಿಎಂಡಬ್ಯ್ಲೂ, ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ, ಒಂದು ಮೊಟ್ಟೆಯ ಕಥೆ, ನನ್ನ ಪ್ರಕಾರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೀಗೆ ನೂರಾರು ಚಿತ್ರಗಳ ಟೈಟಲ್​​​​ಗಳು ವಿಭಿನ್ನವಾಗಿವೆ.

ಕನ್ನಡಕ್ಕಾಗಿ ಒಂದನ್ನು ಒತ್ತಿ
ಡಿಚ್ಕಿ ಡಿಸೈನ್

ಸಿನಿಮಾ ಟೈಟಲ್​​​ಗಳ ಹೆಸರನ್ನು ಆಯ್ಕೆ ಮಾಡುವುದು ನಿರ್ಮಾಪಕ ಹಾಗೂ ನಿರ್ದೇಶಕರ ಸ್ವತಃ ನಿರ್ಧಾರ. ಆದರೆ ಸಿನಿಮಾಗಳ ಟೈಟಲ್ಗಳು ಫಿಲ್ಮ್ ಚೇಂಬರ್​​​​ನಲ್ಲಿ ಯಾವ ಆಧಾರದ ಮೇಲೆ ರಿಜಿಸ್ಟರ್ ಆಗಲಿದೆ ಎಂಬುದರ ಬಗ್ಗೆ ಫಿಲ್ಮ್​ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್​ ಕಾರಣ ನೀಡುತ್ತಾರೆ. ಹೊಸ ಟೈಟಲ್ ನೋಂದಣಿಗೆ ಮೊದಲು 2000 ಸಾವಿರ ರೂಪಾಯಿ ನೀಡಬೇಕು. ಒಂದು ವರ್ಷದ ಬಳಿಕ ಆ ಟೈಟಲ್​​​ಗೆ 200 ರೂಪಾಯಿ ಕೊಟ್ಟು ರಿನಿವಲ್ ಮಾಡಬೇಕು. ನಂತರ ಈ ಟೈಟಲನ್ನು ಚಿತ್ರತಂಡಕ್ಕೆ ಕೋಡಬೇಕಾ, ಬೇಡವಾ ಎಂಬುದರ ಬಗ್ಗೆ ಫಿಲ್ಮ್ ಚೇಂಬರ್, ಟೈಟಲ್ ಕಮಿಟಿಯಲ್ಲಿ ಹಿರಿಯ ನಿರ್ಮಾಪಕರು, ನಿರ್ದೇಶಕರು, ಅಧ್ಯಕ್ಷರು, ಉಪಾಧ್ಯಕ್ಷರು, ಗೌರವ ಕಾರ್ಯದರ್ಶಿ ಸೇರಿದಂತೆ ಎಲ್ಲರ ಸಮ್ಮುಖದಲ್ಲಿ ಚರ್ಚೆ ಮಾಡಲಾಗುವುದು. ಒಳ್ಳೆ ಕಥೆ, ಆಡುಭಾಷೆಯ ಟೈಟಲ್​​​​ಗಳನ್ನು ಇಟ್ಟುಕೊಂಡು ಬಂದ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿ ಬೆಲ್ ಬಾಟಂ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಯೂ ಟರ್ನ್ ಅಂತಹ ಸಿನಿಮಾಗಳು ಯಶಸ್ಸು ಕಂಡಿವೆ. ಈ ಸಿನಿಮಾಗಳಲ್ಲಿ ಟೈಟಲ್ ಮುಖ್ಯ ಆಗುವುದಿಲ್ಲ. ಕಥೆ ಮುಖ್ಯವಾಗುತ್ತದೆ ಎಂದು ಜೈರಾಜ್ ಹೇಳುತ್ತಾರೆ.

ದಯವಿಟ್ಟು ಗಮನಿಸಿ
ಫುಲ್​​​​​ಟೈಟ್ ಪ್ಯಾತೆ

ಇದು ಒಂದು ವರ್ಗದ ಸಿನಿಮಾ ಟೈಟಲ್​​​​ಗಳಾದ್ರೆ ಸಮಾಜಕ್ಕೆ ಹಾಗೂ ಒಬ್ಬ ವ್ಯಕ್ತಿಯ ಹೆಸರಿನ ಮೇಲೆ ಸಿನಿಮಾ ಟೈಟಲ್​​​​​​ಗಳು ಬಂದಿವೆ. ದಂಡುಪಾಳ್ಯ, ವೀರಪ್ಪನ್ ಅಟ್ಟಹಾಸ, ಸೈನೆಡ್ ಮಲ್ಲಿಕಾ , ಇಂತಹ ರಿಯಲ್ ಸ್ಟೋರಿಗಳು ಸಿನಿಮಾ ಆದಾಗ ಆ ವ್ಯಕ್ತಿ ಹೆಸರು ಅಥವಾ ಘಟನೆಯ ಟೈಟಲ್ ಇಡಬೇಕಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಉಮೇಶ್ ಬಣಕಾರ್​. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಭಿನ್ನ, ವಿಭಿನ್ನವಾಗಿ ಟೈಟಲ್ ಇಡೋದು ಆ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಬಿಟ್ಟ ವಿಚಾರ. ಫಿಲ್ಮ್​ ಚೇಂಬರ್ ಆಗಲೀ ಟೈಟಲ್ ಕಮಿಟಿ ಆಗಲಿ, ನಾವು ಅಂತಹ ಟೈಟಲ್ ಇಡಬೇಡಿ ಎಂದು ಹೇಳಲು ಯಾವುದೇ ಕಾರಣಕ್ಕೂ ನಮಗೆ ರೈಟ್ಸ್ ಇಲ್ಲ ಅನ್ನೋದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತು.

ಗೋಧಿಬಣ್ಣ ಸಾಧಾರಣ ಮೈಕಟ್ಟು

ABOUT THE AUTHOR

...view details