ಕರ್ನಾಟಕ

karnataka

ETV Bharat / sitara

'ರಾಜವೀರ ಮದಕರಿ ನಾಯಕ' ಚಿತ್ರದ ಬಗ್ಗೆ ದರ್ಶನ್ ಹೇಳಿದ್ದೇನು...? - Darshan reaction about new movie

ಕೊರೊನಾದಿಂದ ಎಲ್ಲರೂ ಸಂಕಷ್ಟದಲ್ಲಿರುವಾಗ 'ರಾಜವೀರ ಮದಕರಿ ನಾಯಕ'ಯಂಥ ದೊಡ್ಡ ಸಿನಿಮಾ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಪರಿಸ್ಥಿತಿ ತಿಳಿಯಾದ ನಂತರ ಸಿನಿಮಾವನ್ನು ಮತ್ತೆ ಆರಂಭಿಸುವುದಾಗಿ ದರ್ಶನ್ ಹೇಳಿದ್ದಾರೆ.

Darshan
ದರ್ಶನ್

By

Published : Feb 25, 2021, 1:43 PM IST

'ರಾಜವೀರ ಮದಕರಿ ನಾಯಕ' ಸಿನಿಮಾ ಆರಂಭವಾಗುವುದು ಯಾವಾಗ ಎಂಬುದು ಸದ್ಯಕ್ಕೆ ದರ್ಶನ್​​​ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ . ಲಾಕ್​ಡೌನ್ ತೆರವಾದ ನಂತರ ಚಿತ್ರರಂಗದ ಚಟುವಟಿಕೆಗಳು ಮೊದಲಿನಂತೆ ಆರಂಭವಾದರೂ ದರ್ಶನ್ ಮಾತ್ರ ಯಾವ ಸಿನಿಮಾ ಚಿತ್ರೀಕರಣಕ್ಕೆ ಹೋಗದಿರುವುದು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.

ಇದನ್ನೂ ಓದಿ:ದರ್ಶನ್ ಅರೆಸ್ಟ್​ ಆದಾಗ ಆತನ ಬೆನ್ನ ಹಿಂದೆ ನಿಂತಿದ್ದು ನಾನು; ಜಗ್ಗೇಶ್

ಲಾಕ್​ಡೌನ್​​​ಗೂ ಮುನ್ನ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಮತ್ತು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದದಲ್ಲಿ ದರ್ಶನ್ 'ರಾಜವೀರ ಮದಕರಿ ನಾಯಕ' ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಚಿತ್ರಕ್ಕಾಗಿ ಕೆಲವು ದಿನಗಳ ಕಾಲ ಚಿತ್ರೀಕರಣದಲ್ಲೂ ತೊಡಗಿಸಿಕೊಂಡಿದ್ದರು. ಲಾಕ್‍ಡೌನ್ ನಂತರ ಈ ಚಿತ್ರದ ಚಿತ್ರೀಕರಣ ಮುಂದುವರೆಯಬೇಕಿತ್ತು. ಆದರೆ, ಹಾಗೆ ಆಗಲಿಲ್ಲ. ಈ ಕಾರಣದಿಂದ ಆ ಸಿನಿಮಾ ನಿಂತು ಹೋಯ್ತಾ ಎಂಬ ಅನುಮಾನ ಎಲ್ಲರಿಗೂ ಕಾಡುತ್ತಿದೆ. ಇದೀಗ ಸ್ವತ: ದರ್ಶನ್ ಅವರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 'ರಾಜ ವೀರಮದಕರಿ' ಸದ್ಯಕ್ಕೆ ಆರಂಭವಾಗುತ್ತಿಲ್ಲ, ಅದರ ಬದಲು ಮತ್ತೊಂದು ಚಿತ್ರ ಆರಂಭವಾಗಲಿದ್ದು ಶೀಘ್ರದಲ್ಲೇ ಆ ಸಿನಿಮಾ ಬಗ್ಗೆ ಮಾಹಿತಿ ನೀಡುವುದಾಗಿ ದರ್ಶನ್ ಹೇಳಿಕೊಂಡಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದರ್ಶನ್, "ರಾಜವೀರ ಮದಕರಿ ನಾಯಕ' ಸಿನಿಮಾವನ್ನು ಸದ್ಯಕ್ಕೆ ಹೋಲ್ಡ್​​ನಲ್ಲಿಟ್ಟಿದ್ದೇವೆ. ಅಂತಹ ದೊಡ್ಡ ಸಿನಿಮಾ ಮಾಡುವುದು ಸುಲಭದ ಮಾತಲ್ಲ, ಪ್ರಮುಖವಾಗಿ ಎಲ್ಲರೂ ಕೊರೊನಾದಿಂದ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಹಣ ಹಾಕಿಸುವುದು ಬೇಡ ಎಂದು ನಾನೇ ಹಿಂದೆ ಸರಿದಿದ್ದೇನೆ. ಪರಿಸ್ಥಿತಿ ಸ್ವಲ್ಪ ತಿಳಿಯಾದ ನಂತರ 'ರಾಜವೀರ ಮದಕರಿ ನಾಯಕ' ಚಿತ್ರವನ್ನು ಮುಂದುವರೆಸಲಿದ್ದೇವೆ. ಚಿತ್ರ ನೋಡಿದವರೆಲ್ಲ, ಯಾವ ರೇಂಜ್‍ಗೆ ಚಿತ್ರ ಮಾಡಿದ್ದಾರೆ ಎಂದು ಖುಷಿಪಡಬೇಕು. ಆ ಮಟ್ಟಕ್ಕೆ ಚಿತ್ರ ಮಾಡಲಿದ್ದೇವೆ" ಎಂದು ದರ್ಶನ್ ಹೇಳಿಕೊಂಡಿದ್ದಾರೆ.

ABOUT THE AUTHOR

...view details