ಕರ್ನಾಟಕ

karnataka

ETV Bharat / sitara

ತಮ್ಮ ಪುತ್ರನ ಬಗ್ಗೆಯೂ ನೇರ ಮಾತುಗಳನ್ನಾಡಿದ್ರು ಕ್ರೇಜಿ ಸ್ಟಾರ್​! - ವಿಕ್ರಮ್

ನನ್ನ ಮಗ ಎಷ್ಟು ಗಲೀಜಾಗಿ ಇರುತ್ತಾನೋ ಅಷ್ಟೇ ಚೆನ್ನಾಗಿ ಕಾಣಿಸುತ್ತಾನೆ. ಅವನಿಗೆ ಮೇಕಪ್ ಹಾಕಿ ಬೆಳ್ಳಗೆ ಮಾಡಲು ಹೋಗಬೇಡಿ. ಆ ರೀತಿ ಮಾಡಿ, ಈ ರೀತಿ ನಟಿಸಿ ಎಂದು ಹೇಳಬೇಡಿ. ಯಾಕಂದ್ರೆ ನಾನು ಅವನನ್ನು ಎಲ್ಲಾ ರೀತಿಯಲ್ಲೂ ರೆಡಿ ಮಾಡಿದ್ದೇನೆ. ಹೀರೋಗಳು ಯಾವಾಗಲೂ ಹೀರೋಗಳ ಥರನೇ ಇರಬೇಕು. ಹೀರೋಯಿನ್​ಗಳ ಥರ ಇರಬಾರದು ಎಂದು ಕ್ರೇಜಿಸ್ಟಾರ್ ತಮ್ಮ ಪುತ್ರ ವಿಕ್ರಮ್​ ಬಗ್ಗೆ ಹೇಳಿದ್ದಾರೆ.

ಪುತ್ರನ ಬಗ್ಗೆ ಕ್ರೇಜಿ ಸ್ಟಾರ್​ ಹೇಳಿದ ನೇರ ಮಾತುಗಳೇನು

By

Published : Aug 13, 2019, 8:18 AM IST

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್, ವಿಕ್ರಮನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಈಗಾಗಲೇ ಹೊಸ ಚಿತ್ರದ ಶೂಟಿಂಗ್ ಕೂಡಾ ಶುರುವಾಗಿದೆ.

ಇನ್ನು ಚಿತ್ರದ ಟೀಸರ್ ಲಾಂಚ್ ಮಾಡಲು ಆಗಮಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ಚಿತ್ರದಲ್ಲಿ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅವರನ್ನು ಯಾವ ರೀತಿ ತೋರಿಸಬೇಕು ಎಂಬುದರ ಬಗ್ಗೆ ನಿರ್ದೇಶಕ ಸಹನಾಮೂರ್ತಿಗೆ ತುಂಬಾ ಸಹನೆಯಿಂದಲೇ ಒಂದು ಟಿಪ್ಸ್ ಕೊಟ್ಟಿದ್ದಾರೆ.

ಎಲ್ಲರ ಜೊತೆಯೂ ನೇರವಾಗಿ ಮಾತನಾಡುವ ಕಲಾವಿದ, ಅವರ ಪುತ್ರನ ಬಗ್ಗೆಯೂ ನೇರ ನುಡಿಗಳನ್ನಾಡಿದರು. ನನ್ನ ಮಗ ಎಷ್ಟು ಗಲೀಜಾಗಿ ಇರುತ್ತಾನೋ ಅಷ್ಟೇ ಚೆನ್ನಾಗಿ ಕಾಣಿಸುತ್ತಾನೆ. ಅವನಿಗೆ ಮೇಕಪ್ ಹಾಕಿ ಬೆಳ್ಳಗೆ ಮಾಡಲು ಹೋಗಬೇಡಿ. ಆ ರೀತಿ ಮಾಡಿ, ಈ ರೀತಿ ನಟಿಸಿ ಎಂದು ಹೇಳಬೇಡಿ. ಯಾಕಂದ್ರೆ ನಾನು ಅವನನ್ನು ಎಲ್ಲಾ ರೀತಿಯಲ್ಲೂ ರೆಡಿ ಮಾಡಿದ್ದೇನೆ ಎಂದರು.

ಪುತ್ರನ ಬಗ್ಗೆ ಕ್ರೇಜಿ ಸ್ಟಾರ್​ ಹೇಳಿದ ನೇರ ಮಾತುಗಳೇನು

ಹೀರೋಗಳು ಯಾವಾಗಲೂ ಹೀರೋಗಳ ಥರನೇ ಇರಬೇಕು. ಹೀರೋಯಿನ್​ಗಳ ಥರ ಇರಬಾರದು. ಬೇಕಾದರೆ ಹೀರೋಯಿನ್​ಗಳಿಗೆ ತಲೆ ಬಾಚಿ, ಮೇಕಪ್ ಹಾಕಿ. ಬಣ್ಣ-ಬಣ್ಣದ ಬಟ್ಟೆ ಹಾಕಿ ಸುಂದರವಾಗಿ ತೋರಿಸಿ. ನನ್ನ ಮಗ ಸ್ಲಂನಲ್ಲಿರುವ ರೀತಿಯಲ್ಲಿ ತೋರಿಸಿ. ಆಗ ನಮಗೆ ತುಂಬಾ ಚೆನ್ನಾಗಿ ಕಾಣಿಸುತ್ತಾನೆ ಎಂದು ರಸಿಕ ತಮ್ಮ ಪುತ್ರ ವಿಕ್ರಮ್​ ಬಗ್ಗೆ ಹೇಳಿದ್ರು.

ABOUT THE AUTHOR

...view details