ಕರ್ನಾಟಕ

karnataka

ETV Bharat / sitara

ಮತ್ತೆ ಸಿನಿಮಾದಲ್ಲಿ ನಟಿಸುವುದಿಲ್ವಾ ಭಾಮಾ..ಇದಕ್ಕೆ ಮಲಯಾಳಿ ಕುಟ್ಟಿ ಏನಂತಾರೆ..? - Bhama cine carrier

ಮದುವೆಯಾದ ನಂತರ ಭಾಮಾ ಮತ್ತೆ ನಟಿಸುವುದಿಲ್ಲವೇನೋ ಎಂಬ ಬೇಸರ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ ನಾನು ಒಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ಭಾಮಾ ಹೇಳಿಕೊಂಡಿದ್ದಾರೆ.

Bhama come back again
ಭಾಮಾ

By

Published : Sep 11, 2020, 1:26 PM IST

ಯಶ್ ಜೊತೆ 'ಮೊದಲ ಸಲ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಟಿ ಭಾಮಾ ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಶೈಲೂ, ಆಟೋರಾಜ, ಬರ್ಫಿ, ಅಪ್ಪಯ್ಯ, ಅರ್ಜುನ, ರಾಗ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದಾರೆ ಭಾಮಾ.

ಶೈಲೂ ಚಿತ್ರದಲ್ಲಿ ಭಾಮಾ

ಇದೇ ವರ್ಷ ಜನವರಿ ತಿಂಗಳಲ್ಲಿ ಈ ನಟಿ ಅರುಣ್ ಜಗದೀಶ್ ಎಂಬುವವರ ಕೈ ಹಿಡಿದರು. ಅಲ್ಲಿಂದ ಈಚೆಗೆ ಅವರು ಯಾವುದೇ ಸಿನಿಮಾವನ್ನು ಕೂಡಾ ಒಪ್ಪಿಕೊಂಡಿರಲಿಲ್ಲ. ಭಾಮಾ ಇನ್ಮುಂದೆ ನಟಿಸುವುದಿಲ್ಲವೇನೋ ಎಂಬ ಬೇಸರ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ 'ನಾನಿನ್ನೂ ಚಿತ್ರರಂಗ ಬಿಟ್ಟಿಲ್ಲ, ಒಳ್ಳೆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ' ಎಂದು ಸ್ವತ: ಭಾಮಾ ಹೇಳಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಸಮಾಧಾನ ತಂದಿದ್ದು ಮೆಚ್ಚಿನ ನಟಿಯನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

ಜನವರಿಯಲ್ಲಿ ಅರುಣ್ ಜಗದೀಶ್ ಕೈ ಹಿಡಿದ ನಟಿ

ಇನ್ನು ಭಾಮಾ ಸ್ವಲ್ಪ ತೂಕ ಇಳಿಸಿಕೊಂಡು ಸಣ್ಣಗಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಾವು ಮೇಕಪ್ ಇಲ್ಲದ ಫೋಟೋವನ್ನು ಇತ್ತೀಚೆಗೆ ಭಾಮಾ ಅಪ್​ಲೋಡ್ ಮಾಡಿದ್ದು ಅಭಿಮಾನಿಗಳು ಭಾಮಾ ನ್ಯೂ ಲುಕ್​​ ಮೆಚ್ಚಿಕೊಂಡಿದ್ದಾರೆ.

ABOUT THE AUTHOR

...view details