ಕರ್ನಾಟಕ

karnataka

ETV Bharat / sitara

ಆಡಿಯೋ ಬಿಡುಗಡೆಗೆ  'ವೀಕ್​ ಎಂಡ್'​​​​ ಸಜ್ಜು... ಚಿತ್ರಕ್ಕೆ ಎನರ್ಜಿ ತುಂಬಲಿರುವ ಅನಂತ್ ನಾಗ್​ - undefined

ಅನಂತ್​ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ವೀಕ್​ ಎಂಡ್' ಸಿನಿಮಾ ಬಿಡುಗಡೆಗೆ ಸಿದ್ಧವಿದ್ದು ಮುಂದಿನ ಬುಧವಾರ ಆಡಿಯೋ ಬಿಡುಗಡೆಯಾಗುತ್ತಿದೆ. ಶೃಂಗೇರಿ ಸುರೇಶ್ ನಿರ್ದೇಶನದ ಈ ಸಿನಿಮಾವನ್ನು ಡಿ. ಮಂಜುನಾಥ್ ನಿರ್ಮಿಸಿದ್ದಾರೆ.

'ವೀಕ್​ ಎಂಡ್'​​​​

By

Published : Mar 25, 2019, 6:04 PM IST

ಹೊಸಬರ ಚಿತ್ರಗಳ ಪೈಕಿ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ 'ವೀಕ್​ ಎಂಡ್'​​​​ ಎಂಬ ಕುತೂಹಲಭರಿತ ಸಿನಿಮಾ ದಿನೇ ದಿನೆ ತನ್ನ ಹವಾ ಕ್ರಿಯೇಟ್ ಮಾಡಲು ಆರಂಭಿಸಿದೆ. ಚಿತ್ರತಂಡ ಇದೀಗ ಆಡಿಯೋ ಬಿಡುಗಡೆಗೆ ಕೂಡಾ ಪ್ಲ್ಯಾನ್ ಮಾಡಿಕೊಂಡಿದೆ.

'ವೀಕ್​ ಎಂಡ್'​​​​ ಸಿನಿಮಾ ದೃಶ್ಯ

ಕೆಜಿಎಫ್​ ಚಿತ್ರದಲ್ಲಿ ತಮ್ಮ ಧ್ವನಿ ಹಾಗೂ ನಟನೆ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದ ಅನಂತ್​​​​​​​​​​​​​​​​ ನಾಗ್, ಈ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಹಾಗೂ ಯಂಗ್ ಅಂಡ್ ಎನರ್ಜೆಟಿಕ್ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಅನಂತ್ ನಾಗ್ ಜೊತೆ ಮಿಲಿಂದ್, ಸಂಜನಾ ಬುರ್ಲಿ ಮುಂತಾದ ಯುವ ನಟ, ನಟಿಯರು ಕೂಡಾ ಚಿತ್ರದಲ್ಲಿ ಇದ್ದು ಸಿನಿಮಾವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದಾರೆ.

'ವೀಕ್​ ಎಂಡ್'​​​​

ಎಂ.ಎಸ್​​​​​. ಮಯೂರ ಮೋಷನ್ ಪಿಕ್ಚರ್ ಅಡಿ ಡಿ. ಮಂಜುನಾಥ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೇ ಬುಧವಾರ ಸಂಜೆ ಆಡಿಯೋ ಬಿಡುಗಡೆಯಾಗಲಿದ್ದು, ಚಿತ್ರತಂಡ ಸಖತ್ ಜೋಷ್​ನಲ್ಲಿದೆ. ಇನ್ನು ವಿಶೇಷ ಎಂದರೆ ಬಹಳ ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಮನೋಜ್ ಎಂಬುವವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಅನಂತ್​​ ನಾಗ್ ಜೊತೆ ಯುವನಟ

For All Latest Updates

TAGGED:

ABOUT THE AUTHOR

...view details