ಕರ್ನಾಟಕ

karnataka

ETV Bharat / sitara

ಅಮೇಜ಼ಾನ್ ಪ್ರೈಮ್​​​​ನಲ್ಲಿ 'ವೀಕ್ End' ಸಿನಿಮಾ! - ಅಮೇಜ಼ಾನ್ ಪ್ರೈಮ್​​​​

ನಮ್ಮ ಉತ್ತಮ ಕನ್ನಡ ಸಿನಿಮಾಗಳು ಅಮೇಜ಼ಾನ್ ಪ್ರೈಮ್​​​​ನಲ್ಲಿ  ಬಿಡುಗಡೆಯಾಗುತ್ತಿವೆ. ಈ ಸಾಲಿನಲ್ಲಿ ವೀಕೆಂಡ್ ಸಿನಿಮಾ ಒಂದು ವಿಶೇಷವಾದ ಸೇರ್ಪಡೆ ಅಮೇಜಾನ್ ಪ್ರೈಮ್​​​​ನಲ್ಲಿ.

WEEK END IN AMAZON PRIME
ಅಮೇಜ಼ಾನ್ ಪ್ರೈಮ್​​​​ನಲ್ಲಿ 'ವೀಕ್ End' ಸಿನಿಮಾ

By

Published : May 25, 2020, 10:40 AM IST

'ವೀಕೆಂಡ್' ಎಂದ ತಕ್ಷಣ ನಮಗೆ ಬಹುತೇಕ ನೆನಪಾಗುವುದು ನಮ್ಮ ಐಟಿ/ಬಿಟಿ ಟೆಕ್ಕಿಗಳು, ಬೆಂಗಳೂರಿನಂತಹ ಮಹಾನಗರಗಳಲ್ಲಿ ನಡೆಯುವ ಮೋಜು ಮಸ್ತಿ, ಅವರ ಜೀವನ ಶೈಲಿಗಳು. ಅವರ ಸುತ್ತಾಟ, ಖರ್ಚು ವೆಚ್ಚ. ಆದರೆ ಇಂದಿನ ದಿನಗಳಲ್ಲಿ ವೀಕೆಂಡ್ ಅಂದರೆ ಜನತಾ ಕರ್ಫ಼್ಯೂ, ಚಪ್ಪಾಳೆ, ದೀಪ ಬೆಳಗಿಸುವುದು ಮತ್ತು ಮನೆಯಲ್ಲಿ ಕುಳಿತು ತಮ್ಮ ತಮ್ಮ ಮನೆಯವರ ಜೊತೆ ಸಮಯ ಕಳೆಯುವುದು.

ನಮ್ಮ ಉತ್ತಮ ಕನ್ನಡ ಸಿನಿಮಾಗಳು ಅಮೇಜ಼ಾನ್ ಪ್ರೈಮ್​​​​ನಲ್ಲಿ ಬಿಡುಗಡೆಯಾಗುತ್ತಿವೆ. ಈ ಸಾಲಿನಲ್ಲಿ ವೀಕೆಂಡ್ ಸಿನಿಮಾ ಒಂದು ವಿಶೇಷವಾದ ಸೇರ್ಪಡೆ ಅಮೇಜಾನ್ ಪ್ರೈಮ್​​​​ನಲ್ಲಿ. ವೀಕೆಂಡ್ ಸಿನಿಮಾ ಇಂದಿನ ಯುವಪೀಳಿಗೆಯು ಭವಿಷ್ಯದ ಬಗ್ಗೆ ಚಿಂತೆ ಇಲ್ಲದೆ ವರ್ತಮಾನದಲ್ಲೇ ಎಲ್ಲಾ ದುಂದುವೆಚ್ಚ ಮಾಡಿ ಎಲ್ಲವನ್ನೂ ಕಳೆದುಕೊಂಡು ಮುಂದೇನು ಎಂದು ದಾರಿ ತೋಚದೆ ಕೆಟ್ಟ ದಾರಿ ಹಿಡಿಯುವರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತದೆ.

ಅಮೇಜ಼ಾನ್ ಪ್ರೈಮ್​​​​ನಲ್ಲಿ 'ವೀಕ್ End' ಸಿನಿಮಾ

ಸ್ವಾವಲಂಬನೆಯಿಂದ ಬದುಕು ನಡೆಸಲು ಒಳ್ಳೆಯ ಉದಾಹರಣೆ ನೀಡುತ್ತದೆ ಈ ವೀಕೆಂಡ್ ಸಿನಿಮಾ. 'ವೀಕೆಂಡ್' ಸಿನಿಮಾ ಮಯೂರ್ ಮೋಷನ್ ಪಿಕ್ಚರ್ಸ್​ನ ಚೊಚ್ಚಲ ಕೊಡುಗೆ.

ಇಂದಿನ ಆತ್ಮ ನಿರ್ಭರ ಭಾರತ, ಸ್ವಾವಲಂಬನೆಯ ಭಾರತಕ್ಕೆ ಒಳ್ಳೆಯ ಉದಾಹರಣೆ.

ಮಿಲಿಂದ್ ಮೊದಲ ಬಾರಿಗೆ ನಾಯಕ ನಟನಾಗಿ ಸಹಜವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಸಂಜನಾ ಬುರ್ಲಿ ಮೊದಲ ಬಾರಿಗೆ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಹೆಮ್ಮೆಯ ಮೇರು ನಟ ಅನಂತ್ ನಾಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಕಲಾವಿದರು ಮೊದಲ ‌ಬಾರಿಗೆ ಸಿನಿಮಾರಂಗಕ್ಕೆ ಈ ವೀಕೆಂಡ್ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಸದ್ಯಕ್ಕೆ ಅಮೇಜಾನ್ ಪ್ರೈಮ್​ನಲ್ಲಿ ಭಾರತ, ಅಮೆರಿಕ ಹಾಗೂ ಇಂಗ್ಲೆಂಡ್​​ನಲ್ಲಿ ನೋಡಲು ಲಭ್ಯವಿದೆ. ಮಯೂರ್ ಮೋಷನ್ ಪಿಕ್ಚರ್ಸ್ ಮುಂದಿನ ದಿನಗಳಲ್ಲಿ ಉತ್ತಮ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿ ಉತ್ತಮ ಕಲಾವಿದರು, ತಂತ್ರಜ್ಞನರನ್ನು ತೆರೆಗೆ ತರುವ ಪ್ರಯತ್ನದಲ್ಲಿದೆ.

ABOUT THE AUTHOR

...view details