ಬೆಂಗಳೂರು: ಕೊರೊನಾ ಮಹಾಮಾರಿ ವಿರುದ್ಧ ಜಗತ್ತೇ ಸಮರ ಸಾರಿದೆ. ಸಾರ್ವಜನಿಕ ವಲಯದಲ್ಲಿರುವವರು ತಮ್ಮದೇ ಆದ ರೀತಿಯಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಸಾಲಿಗೆ ಸ್ಯಾಂಡಲ್ವುಡ್ನ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ರಚಿಸಿರುವ ಹಾಡೊಂದು ಸೇರ್ಪಡೆಯಾಗಿದೆ.
''ಕೊರೊನಾ ವಿ ವಿಲ್ ಕಿಲ್ ಯು'' ಅನ್ನೋ ಹಾಡೊಂದನ್ನು ಗುರುಕಿರಣ್ ರಚಿಸಿದ್ದು, ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಕ್ವಾರಂಟೈನ್ನ ಕಾರಣದಿಂದಾಗಿ ಯಾವುದೇ ಸಾಹಿತಿ, ಸಹಾಯಕರಿಲ್ಲದೇ ಅವರೊಬ್ಬರೇ ಹಾಡನ್ನು ರಚಿಸಿ ಸಂಗೀತ ನೀಡಿದ್ದಾರೆ.