ಎಲ್ಲವೂ ಅಂದುಕೊಂಡತೆ ನಡೆದಿದ್ರೆ ಇಂದು(ಅಕ್ಟೋಬರ್ 23) ರಾಕಿ ಭಾಯ್ ತೆರೆಯ ಮೇಲೆ ಅಬ್ಬರಿಸುತ್ತಿದ್ದರು. ಆದ್ರೆ ಕೊರೊನಾ ಎಲ್ಲದಕ್ಕೂ ಕಡಿವಾಣ ಹಾಕಿಬಿಟ್ಟಿದೆ. ಲಾಕ್ಡೌನ್ ಸಲುವಾಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಂದೂಡಲಾಗಿತ್ತು. ಅಲ್ಲದೆ ಸಂಜಯ್ ದತ್ ಅನಾರೋಗ್ಯದಿಂದಲೂ ಕೆಲ ಕಾಲ ಶೂಟಿಂಗ್ ಅನ್ನು ನಿಲ್ಲಿಸಲಾಗಿತ್ತು. ಈ ಎಲ್ಲಾ ಕಾರಣದಿಂದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿಲ್ಲ.
ಇದರಿಂದ ಯಶ್ ಅಭಿಮಾನಿಗಳಿಗೆ ತುಂಬಾ ನಿರಾಶೆಯಾಗಿದೆ. ಇದ್ರಿಂದ ತಮ್ಮ ಬೇಸರವನ್ನು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿರುವ ಅವರು, ಸಿನಿಮಾವಂತೂ ಬರಲಿಲ್ಲ, ಕೊನೆಯ ಪಕ್ಷ ಕೆಜಿಎಫ್ 2 ಟೀಸರ್ ಆದರೂ ರಿಲೀಸ್ ಮಾಡಿ ಎಂದು ಟ್ವಿಟ್ಟರ್ ಅಭಿಯಾನ ಶುರು ಮಾಡಿದ್ದಾರೆ.