ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ವಿವಾಹವಾಗಿ ಸುದ್ದಿಯಾಗಿದ್ದಾರೆ. ಆದ್ರೆ, ಅವರ ಪತ್ನಿಯನ್ನೇ ಮತ್ತೆ ವಿವಾಹವಾಗಿರೋದು ವಿಶೇಷ. ಈ ಬಗ್ಗೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಮಗನಿಗಾಗಿ ಮತ್ತೊಮ್ಮೆ ವಿವಾಹವಾಗಿದ್ದೇನೆ ಎಂದಿದ್ದಾರೆ.
ಪ್ರಕಾಶ್ ರಾಜ್ ನಿನ್ನೆ ತಮ್ಮ 11ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಹೀಗಾಗಿ, ತಮ್ಮ ಮಗನ ಆಸೆಯಂತೆ ವಿವಾಹದ ಕ್ಷಣವನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದಾರೆ. ತಮ್ಮ ಪುತ್ರ ವೇದಾಂತ್ಗೆ ನಮ್ಮ ವಿವಾಹ ನೋಡಬೇಕೆನ್ನುವ ಆಸೆಯಂತೆ. ಅದಕ್ಕಾಗಿ ಮತ್ತೆ ವಿವಾಹವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ ಪ್ರಕಾಶ್ ರಾಜ್.