ಕರ್ನಾಟಕ

karnataka

ETV Bharat / sitara

ಮೋದಿ ಹೇಳಿದ್ದೆಲ್ಲಾ ಮಾಡಿದ್ವಿ... ಇದು ಈವೆಂಟ್​ ಅಲ್ಲ, ಮೂಮೆಂಟ್​ ಎಂದ ಡೈಲಾಗ್​ ಕಿಂಗ್ - ಡೈಲಾಗ್​ ಕಿಂಗ್​ನ ಜನರ ಕಾಳಜಿ

ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ ಎಂದು ಡೈಲಾಗ್​ ಕಿಂಗ್​ ಹೇಳಿದ್ದಾರೆ.

Dialogue King Saikumar, Sandalwood star SaiKumar talk On CoronaVirus, Sandalwood star SaiKumar news, ಡೈಲಾಗ್​ ಕಿಂಗ್​ ಸಾಯಿಕುಮಾರ್​, ಕೊರೊನಾ ವೈರಸ್​ ವಿರುದ್ಧ ಸ್ಯಾಂಡಲ್​ವುಡ್​ ಸ್ಟಾರ್​ ಸಾಯಿಕುಮಾರ್​ ಹೋರಾಟ, ಸ್ಯಾಂಡಲ್​ವುಡ್​ ಸ್ಟಾರ್​ ಸಾಯಿಕುಮಾರ್​ ಸುದ್ದಿ, ಡೈಲಾಗ್​ ಕಿಂಗ್​ನ ಜನರ ಕಾಳಜಿ,
ನಟ ಸಾಯಿಕುಮಾರ್​

By

Published : Apr 6, 2020, 2:59 PM IST

ಹೈದರಾಬಾದ್​: ಡೈಲಾಗ್​ ಕಿಂಗ್​ ಸಾಯಿಕುಮಾರ್​ ವಿಡಿಯೋವೊಂದನ್ನು ಹರಿಯಬಿಟ್ಟು ನಾವೆಲ್ಲರೂ ಕೊರೊನಾ ವಿರುದ್ಧ ಜಯ ಸಾಧಿಸುತ್ತೇವೆ ಎಂದು ಹೇಳಿದ್ದಾರೆ.

ಜೈ ಭಾರತ. ಭಾರತೀಯರಿಗೆಲ್ಲರಿಗೂ ನಮಸ್ಕಾರ. ನಿಮ್ಮಲ್ಲಿ ನಾನೊಬ್ಬನಾಗಿರುವುದು ಹೆಮ್ಮೆ ಪಡುತ್ತೇನೆ. ನಮ್ಮ ಪ್ರಿಯ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಅಂದ್ರು ಪಾಲಿಸಿದ್ದೇವೆ. ಲಾಕ್​ಡೌನ್​ ಅಂದ್ರು ಲಾಕ್​ ಆಗಿದ್ದೇವೆ. ಚಪ್ಪಾಳೆ ಹೊಡಿ ಅಂತಾ ಹೇಳಿದ್ರು.. ಚಪ್ಪಾಳೆ ಹೊಡೆದಿದ್ದೇವೆ. ದೀಪ ಬೆಳಗಂದ್ರು ಬೆಳಗಿದ್ದೇವೆ. ಇದು ಒಂದು ಈವೆಂಟ್​ ಅಲ್ಲ ಮೂಮೆಂಟ್​ ಅಂತಾ ಸಾಯಿಕುಮಾರ್​ ಹೇಳಿದ್ದಾರೆ.

ಇದು ಮೋದಿಗಾಗಿ ಅಲ್ಲ, ನಮಗಾಗಿ ಎಂಬುದು ಮರೆಯಬೇಡಿ. ಕೊರೊನಾ ಪ್ರಪಂಚವನ್ನೇ ನಡುಗಿಸುತ್ತಿದೆ. ನ್ಯೂಯಾರ್ಕ್​ನಿಂದ ಹಿಡಿದು ನ್ಯೂದೆಹಲಿಯವರೆಗೆ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಕಳೆದುಕೊಳ್ಳುತ್ತಲೇ ಇದ್ದಾರೆ ಎಂದರು.

ಪ್ರಶ್ನಾರ್ಥವಾಗಿ ಜೀವನ ಬದಲಾಗಿದೆ. ಇದಕ್ಕೆ ದಾರಿ ಒಂದೇ. ಅದುವೇ ಸಾಮಾಜಿಕ ಅಂತರ. ಮನೆಯಲ್ಲೇ ಇರಿ. ಸರ್ಕಾರದ ನಿಯಮವನ್ನು ಪಾಲಿಸಿ. ನಮ್ಮ ಭವಿಷ್ಯ ನಮ್ಮ ಕೈಯಲ್ಲಿಯೇ ಇದೆ. ತಮಾಷೆ ಬೇಡ, ವಿಮರ್ಶೆ ಬೇಡ, ರಾಜಕೀಯವೂ ಬೇಡ. ನಮಗೇಕೆ, ನಮಗ ಈ ಸೋಂಕು ಹರಡುವುದಿಲ್ಲವೆಂಬ ನಿರ್ಲಕ್ಷ್ಯವೂ ನಿಮ್ಮಲ್ಲಿ ಬೇಡ. ಮತ, ಕುಲ, ಭಾಷೆ, ವರ್ಗ ಇವನೆಲ್ಲ ಬಿಟ್ಟು ನಾವೆಲ್ಲರೂ ಒಗ್ಗೂಡಿ ಐಕ್ಯತೆಯಿಂದ ಕೊರೊನಾ ವೈರಸ್​ ವಿರುದ್ಧ ಹೋರಾಟ ನಡೆಸೋಣ, ಗೆಲ್ಲೋಣಾ ಅಂತಾ ಸಾಯಿಕುಮಾರ್​ ಹೇಳಿದ್ದಾರೆ.

ABOUT THE AUTHOR

...view details