ಮುಂಬೈ(ಮಹಾರಾಷ್ಟ್ರ):'ಊ ಅಂತಾವಾ' ಐಟಂ ಸಾಂಗ್ ದೇಶಾದ್ಯಂತ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದು, ನಟಿ ಸಮಂತಾಗೆ ಇನ್ನಿಲ್ಲದ ಹೆಸರು ತಂದುಕೊಟ್ಟಿದೆ. ಮುಂಬೈನಲ್ಲಿ ನಡೆದ ಕ್ರಿಟಿಕ್ ಚಾಯ್ಸ್ ಫಿಲ್ಮಂ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ನಟಿ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಈ ಹಾಡಿನಿಂದಾಗಿ ಜನರು ನನ್ನ ಮೇಲೆ ಯಾವ ರೀತಿಯಲ್ಲಿ ಪ್ರೀತಿ ತೋರಿಸುತ್ತಿದ್ದಾರೆಂದು ವಿವರಿಸಲು ಸಾಧ್ಯವಾಗುತ್ತಿಲ್ಲ. ಊ ಅಂತಾವಾ ಸಾಂಗ್ ಪ್ಯಾನ್ ಇಂಡಿಯಾ ಆಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ನಾನು ನಟನೆ ಮಾಡಿರುವ ರಂಗಸ್ಥಳಂ ಸೇರಿದಂತೆ ಅನೇಕ ಚಿತ್ರ ಮರೆತು ಹೋಗಿರುವ ಪ್ರೇಕ್ಷಕರು, ಇದೀಗ ಊ ಅಂತಾವಾ ಹಾಡಿನಿಂದ ನನ್ನನ್ನು ಗುರುತಿಸುತ್ತಿದ್ದಾರೆ ಎಂದರು.