ದುನಿಯಾ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ರಾತ್ರೋರಾತ್ರಿ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದ ಲೂಸ್ ಮಾದ ಯೋಗಿ ಈಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ಯೋಗೇಶ್, ತಮ್ಮ ಮಗಳ ಅವಾಜ್ಗೆ ಬೆರಗಾಗಿದ್ದಾರೆ.
ಬಹುಕಾಲದ ಗೆಳತಿ ಸಾಹಿತ್ಯ ಅರಸ್ ಜೊತೆ 2017ರಲ್ಲಿ ಸಪ್ತಪದಿ ತುಳಿದಿದ್ದ ಯೋಗಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಯೋಗಿಗೆ ಅವರ ಮಗಳು ಶ್ರೀನಿಕಾ ತೊದಲು ಮಾತಿನಿಂದ ಜಗಳ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಶ್ರೀನಿಕಾಳ ಮುದ್ದು ಮುದ್ದು ಅವಾಜ್ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.