ಕರ್ನಾಟಕ

karnataka

ETV Bharat / sitara

ಬಾಲಿವುಡ್ ನಟ ವಿವೇಕ್ ಒಬೆರಾಯ್ ಜೊತೆ ಪೋಟೋಗೆ ಮುಗಿಬಿದ್ದ ಸಿಲಿಕಾನ್ ಸಿಟಿ ಸುಂದರಿಯರು - Rustum Kannada film

ರುಸ್ತುಂ ಚಿತ್ರದ ಬಳಿಕ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬೆಂಗಳೂರಿನ ಕಾಲೇಜು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್ ಬಾಯ್ ನೋಡಿ ಯುವತಿಯರು ಕೂಗಿ ಸಂಭ್ರಮಿಸಿದಲ್ಲದೆ ಪೋಟೋಗಾಗಿ ಮುಗಿಬಿದ್ದಿದ್ದಾರೆ.

ನಟ ವಿವೇಕ್ ಒಬೆರಾಯ್

By

Published : Sep 1, 2019, 5:21 PM IST

ಬೆಂಗಳೂರಿನ ಖಾಸಗಿ ಕಾಲೇಜೊಂದರ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ವಿವೇಕ್ ಒಬೆರಾಯ್​ರನ್ನ ಇನ್​ವೈಟ್ ಮಾಡಲಾಗಿತ್ತು. ತಮ್ಮ ನೆಚ್ಚಿನ ನಟನ ನೋಡಿದ ಕಾಲೇಜು ಹುಡುಗಿಯರು ಬೊಬ್ಬೆ ಹಾಕಿ ಸಂಭ್ರಮಿಸಿದರು.

ನಟ ವಿವೇಕ್ ಒಬೆರಾಯ್​ಗೆ ಸನ್ಮಾನ
ಬೆಂಗಳೂರಿನ ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್

ಅಲ್ಲದೆ ಕಾರ್ಯಕ್ರಮ ಮುಗಿದ ಬಳಿಕ ವಿವೇಕ್ ಜೊತೆ ಪೋಟೋ ಕ್ಲಿಕ್ಕಿಸೋಕೆ ಯುವತಿಯರ ದಂಡು ಮುಗಿಬಿದ್ದಿತ್ತು. ಇನ್ನೂ ನಟ ವಿವೇಕ್ ಒಬೆರಾಯ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ನಟ ವಿವೇಕ್ ಒಬೆರಾಯ್
ವಿದ್ಯಾರ್ಥಿನಿಗೆ ಪ್ರಶಸ್ತಿ ವಿತರಿಸಿದ ನಟ ವಿವೇಕ್ ಒಬೆರಾಯ್
ನಟ ವಿವೇಕ್ ಒಬೆರಾಯ್

ABOUT THE AUTHOR

...view details